ವಿಶ್ವಾದ್ಯಂತ ಕರೋನ ಪೀಡಿತರ ಸಂಖ್ಯೆ ಎರಡುಕೋಟಿ ಸನಿಹಕ್ಕೆ
ಮಾಸ್ಕೋ, ಆಗಸ್ಟ್ 7: (ಸ್ಪುಟ್ನಿಕ್) ವಿಶ್ವಾದ್ಯಂತ ಕರೋನ ಸೋಂಕು ಮತ್ತು ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಜಗತ್ತಿನಾದ್ಯಂತ ಈವರೆಗೆ ಕರೋನ ಪೀಡಿತರ ಸಂಖ್ಯೆ ಒಂದು ಕೋಟಿ 90 ಲಕ್ಷ ಮೀರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.
ಈ ನಡುವೆ ಅಮೆರಿಕದಲ್ಲಿ ಡಿಸೆಂಬರ್ ವೇಳೆಗೆ ಕರೋನದಿಂದ ಮೃತರ ಸಂಖ್ಯೆ 3ಲಕ್ಷ ಮೀರುವ ನಿರೀಕ್ಷೆಯಿದೆ ಆರೋಗ್ಯ ಸಂಸ್ಥೆ ಆತಂಕ ಹೊರಹಾಕಿದೆ.
ಜಗತ್ತಿನಾದ್ಯಂತ ಕರೋನ ಸೋಂಕಿತರ ಸಂಖ್ಯೆ 2 ಕೋಟಿ ಸನಿಹಕ್ಕೆ ತಲುಪುತ್ತಿದೆ ಈವರೆಗೆ 7ಲಕ್ಷದ 13,ಸಾವಿರ ಕ್ಕೂ ಹೆಚ್ಚು ಜನರು ಈಮಾರಕ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಇದುವರೆಗೆ ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಈ ನಡುವೆ ಅಮೆರಿಕದಲ್ಲಿ ಡಿಸೆಂಬರ್ ವೇಳೆಗೆ ಕರೋನದಿಂದ ಮೃತರ ಸಂಖ್ಯೆ 3ಲಕ್ಷ ಮೀರುವ ನಿರೀಕ್ಷೆಯಿದೆ ಆರೋಗ್ಯ ಸಂಸ್ಥೆ ಆತಂಕ ಹೊರಹಾಕಿದೆ. ಸ್ಥಿರವಾದ ಮುಖವಾಡ ಧರಿಸುವುದರಿಂದ ಸುಮಾರು 70,ಸಾವಿರ ಜೀವಗಳನ್ನು ಉಳಿಸಬಹುದಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಪ್ರಸ್ತುತ ಕರೋನದಿಂದ ಈವರೆಗೆ 1 ಲಕ್ಷದ 60,ಸಾವಿರಕ್ಕೂ ಹೆಚ್ಚು ಸಾವುಗಳು ವರದಿಯಾಗಿದೆ. 4.8 ದಶಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ತಿಳಿಸಿದೆ.