ಅಂತರರಾಷ್ಟ್ರೀಯ

ಕ್ಯಾಚ್ ಬಿಟ್ಟಿದ್ದರಿಂದ ಪಂದ್ಯ ಸೋತೆವು: ಮಾರ್ಗನ್

ಕ್ಯಾಚ್ ಬಿಟ್ಟಿದ್ದರಿಂದ ಪಂದ್ಯ ಸೋತೆವು: ಮಾರ್ಗನ್

ದುಬೈ02 :ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಬಿಟ್ಟಿದ್ದರಿಂದ ಪಂದ್ಯ ಕಳೆದುಕೊಳ್ಳಬೇಕಾಯಿತು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ತಿಳಿಸಿದ್ದಾರೆ.

14ನೇ ಆವೃತ್ತಿಯ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ಗೆ 165 ರನ್ ಸೇರಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ 19.3 ಓವರ್ ಗಳಲ್ಲಿ 5 ವಿಕೆಟ್ ಗೆ 168 ರನ್ ಸೇರಿಸಿ ಜಯ ಸಾಧಿಸಿತು.

ಈ ಪಂದ್ಯದಲ್ಲಿ ನಾವು ಕ್ಷಮತೆಗೆ ತಕ್ಕ ಆಟ ಆಡಲಿಲ್ಲ. ಪಂದ್ಯದಲ್ಲಿ ನಾವು ಕೆಲವು ಕ್ಯಾಚ್ ಗಳನ್ನು ಬಿಟ್ಟಿದ್ದೇವೆ. ಈ ಪಿಚ್ ನಲ್ಲಿ ಬೇಕಾದಷ್ಟು ರನ್ ಕಲೆ ಹಾಕಿದ್ದೇವು. ಆದರೆ ಪಂಜಾಬ್ ಕಿಂಗ್ಸ್ ಸೊಗಸಾಗಿ ಆಡಿತು. ಆದರೆ ಕ್ಯಾಚ್ ಬಿಟ್ಟಿದ್ದರಿಂದ ಪಂದ್ಯವನ್ನು ಕೈ ಬಿಟ್ಟೆವು.

ಶಿವಮ್ ಮಾವಿ ಎಸೆತದಲ್ಲಿ ರಾಹುಲ್ ತ್ರಿಪಾಠಿ ಹಿಡಿದ ಕೆ.ಎಲ್ ರಾಹುಲ್ ಅವರ ಕ್ಯಾಚ್ ಬಗ್ಗೆ ಕೇಳಿದ ಪ್ರಶ್ನೆಗೆ ಮಾರ್ಗನ್, “ನನಗೆ ಅನಿಸಿದ ಹಾಗೆ ಅದು ಔಟ್ ಎಂದು ಕಾಣುತ್ತದೆ. ಹಲವು ಬಾರಿ ನಿಧಾನವಾಗಿ ನೋಡಿದಾಗ, ಅಂಪೈರ್ ಕ್ಯಾಚ್ ಪಡೆದಿದನ್ನು ಅಮಾನ್ಯಗೊಳಿಸಿದರು. ಕೊನೆಗೆ ಅವರ ನಿರ್ಣಯವನ್ನು ಗೌರವಿಸುತ್ತೇವೆ. ಪ್ಲೇ ಆಫ್ ಗೆ ಅರ್ಹತೆ ಪಡೆಯಲು ಸ್ಥಿರ ಪ್ರದರ್ಶನದ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ನಾವು ಆದ ತಪ್ಪನ್ನು ಸರಿ ಪಡಿಸಿಕೊಳ್ಳುತ್ತೇವೆ” ಎಂದಿದ್ದಾರೆ.

ಸುದ್ದಿ ಓದಿ