ಕನಿಷ್ಟ ಒಬ್ಬ ಹಿಂದೂ ಇಲ್ಲದ ಆ ದೇಶದಲ್ಲಿ ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ...!
ಕಾಂಬೋಡಿಯಾ, ಅ 24: ಪ್ರಪಂಚದ ಹಲವು ದೇಶಗಳಲ್ಲಿ ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ಆದರೆ, ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಹೊಂದಿರುವ ಈ ದೇಶದಲ್ಲಿ ಒಬ್ಬನೇ ಒಬ್ಬ ಹಿಂದೂ ಕೂಡ ಇಲ್ಲ ಎಂಬುದು ಆಶ್ಚರ್ಯವಾಗುತ್ತದೆ. ಜೊತೆಗೆ ಆ ದೇಶ ರಾಷ್ಟ್ರ ಧ್ವಜದಲ್ಲಿ ಲಾಂಚನವಾಗಿ ಹಿಂದೂ ದೇವಾಲಯವಿರುವುದು ವಿಶೇಷ. ವಿಶ್ವದಲ್ಲಿ ಹಿಂದೂ ಧರ್ಮ ಅತ್ಯಂತ ಪುರಾತನವಾದದ್ದು ಎಂದು ಪರಿಗಣಿಸಲಾಗಿದೆ. ಹಿಂದೂ ಧರ್ಮ 12 ಸಾವಿರ ವರ್ಷಗಳಷ್ಟು ಹಳೆಯದು ಎಂದು ಭಾವಿಸುತ್ತಾರೆ. ಹಿಂದೂ ಧರ್ಮದಲ್ಲಿ ವಿಗ್ರಹಾರಾಧನೆ, ಪೂಜೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಹಿಂದೂಗಳು ಅನುಸರಿಸುವ ಸನಾತನ ಧರ್ಮ ಮೊದಲನೆಯದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಅಂಕೋರ್ ವಾಟ್ ದೇಗುಲ ವಿಶ್ವದಲ್ಲೇ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಪ್ರಖ್ಯಾತಿ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವಾಗಿದೆ. ಈ ದೇವಾಲಯ ಕಾಂಬೋಡಿಯಾದ ಅಂಕೋರ್‌ನಲ್ಲಿದೆ. ಅಲ್ಲಿನ ಸಿಮ್ರಿಪ್ ನಗರದಲ್ಲಿ ಮೆಕಾಂಗ್ ನದಿಯ ದಡದಲ್ಲಿ ಈ ದೇವಾಲಯವಿದೆ. ದೇವಾಲಯ ಕೆಲವು ನೂರು ಚದರ ಮೈಲಿಗಳಷ್ಟು ವಿಸ್ತೀರ್ಣ ಒಳಗೊಂಡಿದೆ. ಇದು ವಿಷ್ಣುವಿನ ದೇವಸ್ಥಾನ. ಇಲ್ಲಿ ಅಂದಿನ ರಾಜರು ಶಿವನ ದೇವಾಲಯವನ್ನು ನಿರ್ಮಿಸಿದ್ದರು. ಈ ಪ್ರದೇಶವನ್ನು ಪೂರ್ವಕಾಲದಲ್ಲಿ ಯಶೋಧ್ ಪುರ್ ಎಂದು ಕರೆಯಲಾಗುತ್ತಿತ್ತು. ಈ ವಿಷ್ಣು ದೇವಾಲಯವನ್ನು ಕ್ರಿಸ್ತ ಶಕ 1112 ರಿಂದ ಕ್ರಿಸ್ತಶಕ 1153 ವರೆಗೆ ಈ ಪ್ರದೇಶವನ್ನು ಆಳಿದ ರಾಜ ಸೂರ್ಯವರ್ಮ II ನಿರ್ಮಿಸಿದ್ದ ಎಂದು ಹೇಳಲಾಗುತ್ತದೆ. ಈ ದೇವಾಲಯದ ಚಿತ್ರ ಕಾಂಬೋಡಿಯನ್ ರಾಷ್ಟ್ರಧ್ವಜದಲ್ಲಿ ಕಾಣಿಸುತ್ತದೆ. ಇದು ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅದೇ ರೀತಿ ಯುನೆಸ್ಕೋ ಪ್ರಕಟಿಸಿರುವ ವಿಶ್ವ ಪರಂಪರೆಯ ತಾಣವಾಗಿದೆ
ಕಾಂಬೋಡಿಯಾದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯವಿದ್ದರೂ ಈಗ ಇಲ್ಲಿ ಹಿಂದೂಗಳಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಐತಿಹಾಸಿಕ ಮೂಲಗಳ ಪ್ರಕಾರ ಇಲ್ಲಿನ ಜನರು ಅನ್ಯ ಧರ್ಮವನ್ನು ಸ್ವೀಕರಿಸಿದ್ದಾರೆ. ಕಾಂಬೋಡಿಯಾ ಆಗ್ನೇಯ ಏಷ್ಯಾದ ಪ್ರಮುಖ ದೇಶವಾಗಿದೆ. ಈ ಪ್ರದೇಶದಲ್ಲಿ ಸುಮಾರು 17 ಮಿಲಿಯನ್ ಜನಸಂಖ್ಯೆ ಇದೆ. ಪೂರ್ವ ಏಷ್ಯಾದಲ್ಲಿ ಈ ಹಿಂದೆ ಅನೇಕ ಪ್ರಾಚೀನ ದೇವಾಲಯಗಳನ್ನು ಗುರುತಿಸಲಾಗಿದೆ. ಈ ಸಂಶೋಧನೆಗಳು ಭಾರತದ ಪ್ರಾಚೀನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಕಾಂಬೋಡಿಯಾ ಸಂಸ್ಕೃತ ಹೆಸರು ಕಂಬೋಜ್ ಅಥವಾ ಕಾಂಬೋಜ್. ಕಾಂಬೋಜ್ ಗೆ ಸಂಬಂಧಿಸಿದ ಪುರಾಣಗಳ ಕತೆಗಳ ಪ್ರಕಾರ, ಶಿವನ ಪ್ರೇರಣೆಯಿಂದ ಕಂಬು ಸ್ವಯಂಭುವ್ ರಾಜ .. ಕಾಂಬೋಜ್ ದೇಶಕ್ಕೆ ಬಂದು, ಅಲ್ಲಿನ ನಾಗಾ ರಾಜನ ಸಹಾಯದಿಂದ ರಾಜ್ಯ ಸ್ಥಾಪಿಸಿ, ನಂತರ ಆತ ನಾಗಾ ರಾಜ ನ ಮಗಳನ್ನು ಮದುವೆಯಾಗಿದ್ದನು. ಈ ಮೂಲಕ ಕಂಬುಜ್ ರಾಜವಂಶಕ್ಕೆ ಅಡಿಪಾಯ ಹಾಕಿದ್ದ, ಇಲ್ಲಿಯ ಜನರು ಈಗಲೂ ಹಿಂದೂಗಳನ್ನು ಕಂಡರೆ ವಿಶೇಷ ಪ್ರೀತಿ ತೋರುತ್ತಾರೆ.