ಸಾರ್ವಜನಿಕ ಆಸ್ಪತ್ರೆಗೆ ನ್ಯಾಯಾಧೀಶರ ಆಕಸ್ಮಿಕ ಭೇಟಿ
ಹುಕ್ಕೇರಿ 23: ಸಾರ್ವಜನಿಕ ಹಿರಿಯ ದಿವಾಣಿ ನ್ಯಾಯಾಧೀಶ ಕೆ. ಎಸ್. ರೊಟ್ಟೆರ ಮತ್ತು ಕಿರಿಯ ನ್ಯಾಯಾಧೀಶ ಕೆ. ಅಂಬಣ್ಣಾ ಆಕಸ್ಮಿಕವಾಗಿ ಭೇಟಿ ನೀಡಿ ಪರೀಶೀಲಿಸಿದರು.
ಹುಕ್ಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರದ ಸೌಲಭ್ಯಗಳು ರೋಗಿಗಳಿಗೆ ಸಮರ್ಕವಾಗಿ ಚಿಕಿತ್ಸೆ ಲಭಿಸುತ್ತಿವೆಯೆ ಎಂಬುದನ್ನು ಪರಿಸಿಲಿಸಲು ಇಂದು ನ್ಯಾಯಾಧೀಶರು ಆಸ್ಪತ್ರಗೆ ಆಗಮಿಸಿ ವೈದ್ಯರ ತಪಾಸಣಾ ಕೊಠಡಿ, ರಕ್ತ ಸಂಗ್ರಹಣಾ ಬ್ಯಾಂಕ, ಓಷಧ ವಿತರಣೆ ಕೇಂದ್ರ, ರಕ್ತ ತಪಾಸಣಾ ಲ್ಯಾಬೋರೇಟರಿ, ಎಕ್ಸರೆ ಯುನಿಟ್ ಸೇರಿದಂತೆ ಮಹಿಳೆಯರ ಪ್ರಸೂತಿ ಕೇಂದ್ರಗಳನ್ನು ಪರೀಶೀಲಿಸಿ ಮುಖ್ಯ ವೈದ್ಯಾಧಿಕಾರಿ ಮಹಾಂತೇಶ ನರಸನ್ನವರ ಮತ್ತು ಡಾ, ರೀಯಾಜ್ ಮಕಾನದಾರ ಅವರಿಂದ ಮಾಹಿತಿ ಪಡೆದರು.
ನಂತರ ಓಷಧಿ ಸಂಗ್ರಹಣಾ ಉಗ್ರಾಣ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿ ಒಂದುವಾರದಲ್ಲಿ ಸರಿಮಾಡುವಂತೆ ಸೂಚನೆ ನೀಡಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ನ್ಯಾಯಾಧೀಶ ರೋಟ್ಟೆರ ಉಚ್ಚ ನ್ಯಾಯಾಲಯದ ಆದೇಶದಂತೆ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿ ವ್ಯವಸ್ಥೆಯನ್ನು ಪರೀಶೀಲನೆ ಮಾಡಿದ್ದೇವೆ ಹಾಗೂ ರೋಗಿಗಳೊಂದಿಗೆ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡ ಪ್ರಕಾರ ಇಲ್ಲಿಯ ವೈದ್ಯರು ತಮಗೆ ನೀಡಿದ ಸೌಲಭ್ಯಗಳಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ನ್ಯೂನ್ಯತೆಗಳನ್ನು ಸರಿಪಡಿಸಲು ತಿಳಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳಾದ ಉದಯಸಿಂಗ ಹಜಾರೆ, ಆರ್. ಹರಿಶ, ಸತೀಶ ಚೌಗಲಾ ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.