ಪಾಶ್ಚಿಮಾತ್ಯ ಒತ್ತಡರಹಿತ ಪರಮಾಣು ಮಾತುಕತೆ ಅಗತ್ಯ: ಇರಾನ್ ಆಧ್ಯಕ್ಷ
ಟೆಹ್ರಾನ್, ಸೆ 5: ಇರಾನ್ ಸರ್ಕಾವು ಪರಮಾಣು ಒಪ್ಪಂದದ ಮಾತುಕತೆಗೆ ಸಿದ್ಧವಿದೆ. ಆದರೆ, ಅದು ಪಾಶ್ಚಿಮಾತ್ಯ ದೇಶಗಳ ಹೊಸ ನಿರ್ಬಂಧಗಳು ಮತ್ತು ಒತ್ತಡಗಳನ್ನು ಒಳಗೊಂಡಿರಬಾರದು ಎಂದು ಅದರ ಅಧ್ಯಕ್ಷ ಸಯ್ಯದ್ ಇಬ್ರಾಹಿಂ ರೈಸಿ ಶನಿವಾರ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಅವರು, ಇರಾನ್ ಸರ್ಕಾರವನ್ನು ಕೇಂದ್ರೀಕರಿಸಿ ಮಾತುಕತೆ ನಡೆಸಲಾಗುವುದು. ಅದು ಯಾವುದೆ ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಮಣಿಯುವುದಿಲ್ಲ. ಒತ್ತಾಯದಡಿಯಲ್ಲಿ ಮುಂದುವರಿದರೆ ಮಾತುಕತೆಗಳು ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
2015 ರಲ್ಲಿ ಅಮೆರಿಕ, ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್, ಜರ್ಮನಿ ಮತ್ತು ಯುರೋಪಿಯನ್ ಒಕ್ಕೂಟ ಪಿ5+1 ಗುಂಪಿನ ರಾಷ್ಟ್ರಗಳೊಂದಿಗೆ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತು. ತನ್ನ ಪರಮಾಣು ಕಾರ್ಯಕ್ರಮವನ್ನು ಹಿಂಪಡೆದುಕೊಳ್ಳುವುದು ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಐದು ವರ್ಷಗಳ ನಂತರ ಶಸ್ತ್ರಾಸ್ತ್ರ ನಿರ್ಬಂಧವನ್ನು ತೆಗೆದುಹಾಕುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಈ ಒಪ್ಪಂದ ವಿಧಿಸಿದೆ.
2018 ರಲ್ಲಿ, ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದು ಇರಾನ್ ವಿರುದ್ಧ ಕಠಿಣ ನೀತಿಗಳನ್ನು ಜಾರಿಗೊಳಿಸಿತ್ತು.
2021ರ ಏಪ್ರಿಲ್‌ನಿಂದ, ಜೆಸಿಪಿಒಎ ಜಂಟಿ ಆಯೋಗ ವಿಯೆನ್ನಾದಲ್ಲಿ ಶೃಂಗಸಭೆಗಳನ್ನು ಆಯೋಜಿಸಿದೆ. ಅಮೆರಿಕದ ನಿರ್ಗಮನದ ನಂತರ ಒಪ್ಪಂದ ಕುಸಿಯದಂತೆ ತಡೆಯಲು ವಿನ್ಯಾಸಗೊಳಿಸಲಾದ ಹಲವಾರು ಅನೌಪಚಾರಿಕ ಸಭೆಗಳನ್ನು ಆಯೋಜಿಸಲಾಗಿತ್ತು. ಆರನೇ ಸುತ್ತಿನ ಚರ್ಚೆಗಳು ಜೂನ್ 20 ರಂದು ಕೊನೆಗೊಂಡವು.