ಬ್ರಿಟನ್ ರಾಜಕುಮಾರನ ಕಾರಿಗೆ ದುಬಾರಿ ಮದ್ಯವೇ ಇಂಧನ....!
ಲಂಡನ್ , ಅ 14: ಸಾಮಾನ್ಯವಾಗಿ ಕಾರುಗಳು ಡೀಸೆಲ್, ಪೆಟ್ರೋಲ್ ನಿಂದ ಚಲಿಸುತ್ತವೆ. ಇನ್ನೂ ಮುಂದುವರಿದ ತಂತ್ರಜ್ಞಾನದಿಂದಾಗಿ ಎಲೆಕ್ಟ್ರಿಕ್ ಕಾರುಗಳು ಈಗ ರಸ್ತೆಗಳಿಗೆ ಇಳಿಯುತ್ತಿವೆ. ಆದರೆ .. "ನನ್ನ ಕಾರು ಮಾತ್ರ ವೈನ್ ನಿಂದ ಚಲಿಸುತ್ತದೆ ಎಂದು ಹೇಳುತ್ತಾರೆ ಬ್ರಿಟನ್ ಯುವ ರಾಜ ಪ್ರಿನ್ಸ್ ಚಾರ್ಲ್ಸ್ (72)". ನಾವು ಮದ್ಯ ಸೇವಿಸಿ ಕಾರು ಚಲಾಯಿಸಿದರೆ ಅಪರಾಧ... ಆದರೆ, ಕಾರು ಚಲಿಸುವುದೇ ವೈನ್ ನಿಂದ ಎಂದು ಕೇಳುವುದು ವಿಚಿತ್ರವಾಗಿದೆ. ತಮ್ಮ ಆಸ್ಟೋನ್ ಮಾರ್ಟಿನ್ ಕಾರಿಗೆ ವೈನ್ ತುಂಬಿದರೆ ಮಾತ್ರ ಚಲಿಸುತ್ತದೆ ಎಂದು ಹೇಳಿದ್ದಾರೆ. ತಮ್ಮ ಅರಮನೆಯಲ್ಲಿರುವ ಹಳೆಯ ಕಾರಿಗೆ ವೈನ್ ಹಾಕಿ ಪ್ರಿನ್ಸ್ ಚಾರ್ಲ್ಸ್ ಲಂಡನ್ ರಸ್ತೆಗಳಲ್ಲಿ ಸುತ್ತುತ್ತಾರೆ. ಪ್ರಿನ್ಸ್ ಚಾರ್ಲ್ಸ್ ಗೆ ಅಸ್ಟೋನ್ ಮಾರ್ಟಿನ್ ಕಾರು ಎಂದರೆ ಅಚ್ಚುಮೆಚ್ಚು, ತಮ್ಮ 21 ವಯಸ್ಸಿನಲ್ಲಿ ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ನಂತರ ಅದನ್ನು ತಮ್ಮ ಅಭಿರುಚಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದಾರೆ.
ಎಂಜಿನಿಯರ್‌ಗಳು ಶ್ರಮ ಪಟ್ಟು.. ಈ ಕಾರು ವೈನ್‌ನಲ್ಲಿ ಚಲಿಸುವಂತೆ ಮರು ವಿನ್ಯಾಸಗೊಳಿಸಿದ್ದಾರೆ. ಆಗಾಗ ಚೀಸ್ ತಯಾರಿಸುವ ಸಂದರ್ಭದಲ್ಲಿ ಒಡೆದ ಹಾಲನ್ನು ಸಹ ಇಂಧನವಾಗಿಯೂ ಬಳಸಲಾಗುತ್ತದೆ ಎಂದು ಪ್ರಿನ್ಸ್ ಚಾರ್ಲ್ಸ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿನ್ಸ್ ಚಾರ್ಲ್ಸ್, ವಾಯು ಮಾಲಿನ್ಯ ತಗ್ಗಿಸುವ ಪ್ರಯತ್ನದ ಭಾಗವಾಗಿ ಪೆಟ್ರೋಲ್ , ಡೀಸೆಲ್ ಬದಲಿಗೆ ವೈನ್ ಬಳಸುತ್ತಿರುವುದಾಗಿ ಹೇಳಿದ್ದಾರೆ. ಈ ತಿಂಗಳ 31 ರಂದು ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಕುರಿತು ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮಾತನಾಡಿದ ರಾಜಕುಮಾರ, ಭೂಮಿಯನ್ನು ರಕ್ಷಿಸಲು ವಿಶ್ವ ರಾಷ್ಟ್ರಗಳು ವಿಶ್ವಸಂಸ್ಥೆಯ ಜೀವ ವೈವಿಧ್ಯ ಶೃಂಗಸಭೆಯಲ್ಲಿ ಪಾಲ್ಗೊಂಡು ಪ್ರಮುಖ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ.