ಚೀನಾದಿಂದ ಮೊದಲ ಫಾರ್ಮುಲಾ ಒನ್ ಚಾಲಕ ...
ಬೀಜಿಂಗ್, ನ 17: ಫಾರ್ಮುಲಾ ಒನ್ (ಎಫ್ 1) ಕ್ರೀಡೆಯಲ್ಲಿ ಈವರೆಗೆ ಹಿಂದುಳಿದಿದ್ದ ಚೀನಾ ದೇಶದ ಕ್ರೀಡಾಪಟುಗಳು ಇದೇ ಮೊದಲ ಬಾರಿ ಈ ವಲಯವನ್ನು ಪಾದಾರ್ಪಣೆ ಮಾಡಿದ್ದಾರೆ. ಮುಂದಿನ ವರ್ಷದ ಎಫ್ 1 ಋತುವಿನಲ್ಲಿ ಚೀನಾದ ಗುವಾಂಗ್ ಝೌ ಝೌ ರಂಗ ಪ್ರವೇಶಿಸಲಿದ್ದಾರೆ. ಪ್ರಸ್ತುತ ಫಾರ್ಮುಲಾ 2 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ 22 ವರ್ಷದ ಗುವಾನ್‌ಝೌ ಝೌ ಅವರೊಂದಿಗೆ ಆಲ್ಫಾ ರೋಯೊ ತಂಡ ಒಪ್ಪಂದ ಮಾಡಿಕೊಂಡಿದೆ.
ಕಳೆದ ಮೂರು ವರ್ಷಗಳಿಂದ ಆಲ್ಫಾ ರೋಯೋ ಗೆ ಚಾಲಕರಾಗಿದ್ದ ಜಿಯೋವಿನಾಜಿ ಅವರ ಒಪ್ಪಂದ ಅಂತ್ಯಗೊಂಡಿದೆ. ಮುಂದಿನ ಋತುವಿನಲ್ಲಿ ಅವರ ಸ್ಥಾನವನ್ನು ಗುವಾಂಗ್‌ಝೌ ಝೌ ತುಂಬಲಿದ್ದಾರೆ.