ಲಿಬಿಯಾದಿಂದ 62 ಅಕ್ರಮ ವಲಸಿಗರ ಗಡೀಪಾರು
ಟ್ರಿಪೊಲಿ, ನವೆಂಬರ್ 18 : ಲಿಬಿಯಾ 62 ಅಕ್ರಮ ವಲಸಿಗರನ್ನು ಚಾಡ್ ಮತ್ತು ಸುಡಾನ್ಗೆ ಗಡೀಪಾರು ಮಾಡಿದೆ ಎಂದು ಸರಕಾರದ ವಲಸೆ ನಿಯಂತ್ರಣ ಇಲಾಖೆ ಪ್ರಕಟಿಸಿದೆ. ಚಾಡ್ ಮತ್ತು ಸುಡಾನ್ ಜೊತೆಗಿನ ದಕ್ಷಿಣದ ಗಡಿಗಳ ಮೂಲಕ ವಲಸಿಗರನ್ನು ಗಡೀಪಾರು ಮಾಡಲಾಗಿದೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ಲಿಬಿಯಾದಲ್ಲಿ 650,000 ಕ್ಕೂ ಹೆಚ್ಚು ಅಕ್ರಮ ವಲಸಿಗರು ಇದ್ದು, ಅವರಲ್ಲಿ 6,000 ಮಹಿಳೆಯರು ಮತ್ತು ಮಕ್ಕಳನ್ನು ಬಂಧನ ಕೇಂದ್ರಗಳಲ್ಲಿ ಬಂಧಿಸಲಾಗಿದೆ ಎಂದೂ ವಲಸೆಯ ಅಂತಾರಾಷ್ಟ್ರೀಯ ಸಂಸ್ಥೆ ಇತ್ತೀಚೆಗೆ ಹೇಳಿತ್ತು . 2011 ರಲ್ಲಿ ತನ್ನ ಮಾಜಿ ನಾಯಕ ಮಹಮ್ಮದ್ ಗಡಾಫಿ ಪತನವಾದಾಗಿನಿಂದಲೂ ದೇಶವು ಅಸುರಕ್ಷತೆ ಮತ್ತು ಗೊಂದಲದಲ್ಲಿ ಸಿಲುಕಿದ್ದು, ಪರಿಣಾಮ ಅಕ್ರಮ ವಲಸಿಗರ ಸಮಸ್ಯೆಯೂ ಹೆಚ್ಚಾಗಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 