ಅಂತರರಾಷ್ಟ್ರೀಯ

ನಾಗರಿಕ ಹೋರಾಟಗಳ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ನಾಗರಿಕ ಹೋರಾಟಗಳ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಬ್ಯಾಂಕಾಕ್: ಡಿ, 6: ಮ್ಯಾನ್ಮಾರ್‌ನ ನ್ಯಾಯಾಲಯವು ನಾಗರಿಕ ಹೋರಾಟಗಳ ನಾಯಕಿ ಆಂಗ್ ಸಾನ್ ಸೂಕಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ.

ಪ್ರಚೋದನೆ, ಶಾಂತಿ ಭಂಗ ಮತ್ತು ಕೋವಿಡ್​​-19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಂಗ್ ಸಾನ್ ಸೂಕಿ ಅವರನ್ನು ಸೋಮವಾರ ತಪ್ಪಿತಸ್ಥರೆಂದು ನಿರ್ಧರಿಸಿದ ಕೋರ್ಟ್​, ಈ ಶಿಕ್ಷೆ ವಿಧಿಸಿದೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ವಕ್ತಾರರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. 

ಜಾವ್ ಮಿನ್ ತುನ್ ಅವರು ಎರಡು ಆರೋಪಗಳಲ್ಲಿ ತಲಾ ಎರಡು ವರ್ಷಗಳ ಜೈಲುವಾಸವನ್ನು ಅನುಭವಿಸಲಿದ್ದಾರೆ ಎಂದು ಹೇಳಿದರು.

ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರ್‌ನಲ್ಲಾದ ಸೇನಾ ದಂಗೆಯ ನಂತರ 76 ವರ್ಷದ ಸೂಕಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಆಂಗ್ ಸಾನ್ ಸೂಕಿ ಮತ್ತು ವಿನ್ ಮೈಂಟ್‌ಗೆ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.


ಸುದ್ದಿ ಓದಿ