ಮೂಡಲಗಿ

ಮೂಡಲಗಿ ಪಟ್ಟಣದಲ್ಲಿ ಮೂರು ದಿನಗಳ ಕಾಲ ಜರುಗಿದ ಕೃಷಿಮೇಳದ ಸಮಾರೋಪದ ಕಾರ್ಯಕ್ರಮ

ಮೂಡಲಗಿ ಪಟ್ಟಣದಲ್ಲಿ ಮೂರು ದಿನಗಳ ಕಾಲ ಜರುಗಿದ ಕೃಷಿಮೇಳದ ಸಮಾರೋಪದ ಕಾರ್ಯಕ್ರಮ

ಮೂಡಲಗಿ 09: ಇಲ್ಲಿನ ಎಸ್‌.ಎಸ್‌.ಆರ್ ಕಾಲೇಜು ಮೈದಾನದಲ್ಲಿ ಕಳೆದ ಅ.5ರಿಂದ ಪ್ರಾರಂಭಗೊಂಡ ಕೃಷಿಮೇಳ ಸೋಮವಾರ ಮುಕ್ತಾಯಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಮೇಳದ ಸದುಪಯೋಗ ಪಡೆದುಕೊಂಡರು. ಪ್ರಮುಖವಾಗಿ ಜಾನುವಾರುಗಳ ಪ್ರದರ್ಶನ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.  

ಮೂಡಲಗಿ ಪಟ್ಟಣದಲ್ಲಿ ದ್ವಿತೀಯ ಬಾರಿಗೆ ನವರಾತ್ರಿ ಉತ್ಸವ ಸಮಿತಿಯಿಂದ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿತ್ತು. ಸೋಮವಾರದಂದು ಕೊನೆಯ ದಿನವಾದ ಹಿನ್ನಲೆ ಕೃಷಿ ಮೇಳದಲ್ಲಿ ಸಿರಿಧಾನ್ಯದ ಊಟದ ವ್ಯವಸ್ಥೆಯನ್ನು ಆಯೋಜನೆ ಮತ್ತು ಕೃಷಿ ಮೇಳದ ಸಮಾರೋಪದ ಕಾರ್ಯಕ್ರಮದಲ್ಲಿ ದಿವಾಣಿ ಹಾಗೂ ಜೆ.ಎಂ.ಎಫ್‌.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಸಿರಿದಾನ್ಯದ ಊಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತಾಪಿ ವರ್ಗದವರಿಗೆ ಆಧುನಿಕ ಕೃಷಿ ಪದ್ಧತಿಯಲ್ಲಿ ಯಂತ್ರೋಪಕರಣಗಳ ಬಳಕೆ ಮೂಲಕ ಕೃಷಿಕ ಶ್ರಮ ಸರಳಗೊಳಿಸುವ, ಕಾರ್ಮಿಕ ಅಭಾವ ನೀಗಿಸುವ ಮತ್ತು ಸಾವಯುವ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪಟ್ಟಣದ ಇತಿಹಾಸದಲ್ಲೇ ದ್ವಿತೀಯ ಬಾರಿ ನಡೆದ ಬೃಹತ ಕೃಷಿ ಮೇಳ ಹಳ್ಳಿಯ ಕೃಷಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು. 

ಕೃಷಿಮೇಳ ಉದ್ಘಾಟನಾ ಸಮಾರಂಭದ ಬಳಿಕ ಸಮಾರೋಪದ ತನಕ ನಡೆದ ರೈತಾಪಿ ವರ್ಗದ ಸಾಕಷ್ಟು ಸ್ಪರ್ಧೆಗಳು, ಪ್ರದರ್ಶನಗಳು ಜರುಗಿದವು. ಸ್ಪರ್ಧೆಯಲ್ಲಿ ಭಾಗವಹಿಸಿದ ರೈತಾಪಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕ ರಂಗಪ್ಪ ನಾಗನ್ನವರ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲ್ವರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾರತಿ ಕೋಣಿ, ವಕೀಲರಾದ ಲಕ್ಷ್ಮಣ ಅಡಿಹುಡಿ, ಅಜ್ಜಪ್ಪ ಅಂಗಡಿ, ಜಗು ತೇಲಿ, ಈಶ್ವರ ಮುರಗೋಡ, ಚಂದ್ರು ಗಾಣಿಗ, ಈರ​‍್ಪ ಢವೇಳಶ್ವರ, ಸಂಜು ಕಮತೆ, ಮಲ್ಲು ಬೋಳನವರ, ಮಹೇಶ ಒಡೆಯರ್, ಪ್ರಭು ತೇರದಾಳ, ಹಣಮಂತ ಸತರಡ್ಡಿ, ಯಲ್ಲಪ್ಪ ಪೂಜೇರಿ, ರಾಜೇಂದ್ರ ಢವೇಳಶ್ವರ ಹಾಗೂ ಸಮಿತಿ ಸದಸ್ಯರು ಇದ್ದರು. 


ಸುದ್ದಿ ಓದಿ