ಹುಕ್ಕೇರಿಯಲ್ಲಿ ವೀರಶೈವ ಲಿಂಗಾಯತ, ಒಳ ಪಂಗಡಗಳ ವಧು-ವರರ ಸಮಾವೇಶ
ಲೋಕದರ್ಶನ ವರದಿ
ಹುಕ್ಕೇರಿ 21: ನಗರದ ಶ್ರೀ ಗುರುಶಾಂತೇಶ್ವರ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ವೀರಶೈವ ಲಿಂಗಾಯತ ಹಾಗೂ ಒಳ ಪಂಡಗಳ ವಧು-ವರರ 10ನೇ ಸಮಾವೇಶವನ್ನು ಶನಿವಾರ ದಿನಾಂಕ 1 ಜನೇವರಿಯಂದು ಮುಂಜಾನೆ 10 ಗಂಟೆಗೆ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ವಿರಕ್ತಮಠದ ಶಿವಬಸವ ಸ್ವಾಮಿಗಳ ಆಶೀವಾದದೊಂದಿಗೆ ಹಮ್ಮಿಕೊಂಡಿರುವದಾಗಿ ಸಂಯೋಜಕ ಶಿವಾನಂದ ಝಿರ್ಲಿ ತಿಳಿಸಿದರು.
ಅವರು ನಗೆದಲ್ಲಿ ಆಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಗುರುಶಾಂತೇಶ್ವರ ವಧು-ವರರ ಮಾಹಿತಿ ಕೇಂದ್ರವು ಕಳೆದ 9 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು ಹುಕ್ಕೇರಿ, ಸಂಕೇಶ್ವರ, ಗೋಕಾಕ, ಬೈಲಹೊಂಗಲ ಹಾಗೂ ಬೆಳಗಾವಿ ಮಹಾ ನಗರದಲ್ಲಿ ವಧು-ವರರ ಯಶಸ್ವಿ ಸಮಾವೇಶಗಳನ್ನು ಆಯೋಜಿಸಿದೆ. ನಮ್ಮಲ್ಲಿ ಎಲ್ಲ ಪದವಿಧರರು, ಸರಕಾರಿ, ಅರೇ ಸರಕಾರಿ ನೌಕರರು, ಸ್ವಂತ ಉದ್ದಿಮೆದಾರರು, ಒಕ್ಕಲುತನ ವ್ಯವಸಾಯ ಮಾಡುವ ವಧು-ವರರ ಮಾಹಿತಿಗಳು ಲಭ್ಯವಾಗಿದ್ದು ಮದುವೆ ಮಾಡಿಕೊಳ್ಳಲಿಚ್ಚಿಸುವ ವದು-ವರರು ಈ ಸಮಾವೇಶದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ವೀರಶೈವ ಲಿಂಗಾಯತ, ಪಂಚಮಸಾಲಿ, ಬಣಜಿಗ, ಆದಿ ಬಣಜಿಗ, ಕುರುಹಿನಶೆಟ್ಟಿ, ಶೀಲವಂತ, ಕಂಬಾರ, ಕುಂಬಾರ, ಜಂಗಮ, ಬೇಡ ಜಂಗಮ, ಕೋಳಿ, ನೇಕಾರ, ಗಾಣಿಗ, ಬಣಕಾರ, ವಿಶ್ವಕರ್ಮ, ಮಡಿವಾಳ, ಗೌಳಿ, ಕುರುಬ, ಮೇದಾರ ಮುಂತಾದ ಎಲ್ಲ ಒಳಪಂಗಡಗಳ ಹಾಗೂ ವಿಧುರ, ವಿಧವೆಯರು, ವಿಚ್ಚೇದಿತರು, ತಡವಾಗಿ ಮದುವೆಯಾಗ ಬಯಸುವವರು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಬಯೋಡಾಟಾದೊಂದಿಗೆ ಕೇಂದ್ರದಲ್ಲಿ ಹೆಸರು ನೊಂದಾಯಿಸಲು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಶಿವಾನಂದ ಝಿರ್ಲಿ ಗುರುಶಾಂತೇಶ್ವರ ವಧು-ವರರ ಮಾಹಿತಿ ಕೇಂದ್ರ ಹುಕ್ಕೇರಿ ಮೋಬಾಯಿಲ್ : 8660057488, 9035953958 ಸಂಪರ್ಕಿಸಬಹುದು.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾ ಘಟಕಾಧ್ಯಕ್ಷ ಸುಭಾಷ ನಾಯಿಕ ಮಾತನಾಡಿದರು.