ಮುಂಡರಗಿ

ಶ್ರೀಮದ್ ಭಾಗವತ ಪ್ರವಚನದ ಮಂಗಲೋತ್ಸವ

ಶ್ರೀಮದ್ ಭಾಗವತ ಪ್ರವಚನದ ಮಂಗಲೋತ್ಸವ

ಲೋಕದರ್ಶನ ವರದಿ

ಮುಂಡರಗಿ 11:  ನಗರದ ನಂಜನಗೂಡ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪ್ರಾರಂಭಗೊಂಡಿದ್ದ ಶ್ರೀಮದ್ ಭಾಗವತ ಪ್ರವಚನದ ಮಂಗಲೋತ್ಸವದ ನಿಮಿತ್ತ ಸೆ. 10ರಂದು ವೇದ ವ್ಯಾಸರ, ಶ್ರೀಮಧ್ವಾಚಾರ್ಯರ, ಭಾವಚಿತ್ರಗಳ, ಹಾಗೂ ಶ್ರೀಮದ್ ಭಾಗವತ ಗ್ರಂಥಗಳ ಪಾಲಕಿ ಮೂಲಕ ಮೆರವಣಿಗೆ ಜರುಗಿತು.

    ಅಲಂಕೃತ ಪಾಲಕೀಯಲ್ಲಿ ಗ್ರಂಥಗಳ ಮೆರವಣಿಗೆ ನಗರದಲ್ಲಿ ಜರುಗಿತು. ರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀಮಠದ ಗೌರವ ವಿಚಾರಣಾ ಕರ್ತರಾದ ನಾರಾಯಣ ಇಲ್ಲೂರ ಚಾಲನೆ ನೀಡಿದರು.

  ಪರಿಮಳಾ ಭಜನಾ ಮಹಿಳಾ ಮಂಡಳ ಗೌರವಾಧ್ಯಕ್ಷ ಶಮಂತಕಮಣಿ ಇಲ್ಲೂರ, ಅಧ್ಯಕ್ಷರಾದ ಚಂದ್ರಕಲಾ ಕಾಗಲಕರ, ದಿಲೀಪಕುಮಾರ ಜೋಶಿ, ಕೃಷ್ಣಮೂರ್ತಿ , ಗುಂಡುರಾವ ಕಾಗಲಕರ, ಸೇತುರಾಮಾಚಾರ್ಯ ಕಟ್ಟಿ, ರಘೋತ್ತಮ ಡಂಬಳ, ತಿರುಮಲರಾವ ದೇಶಪಾಂಡೆ,  ರಾಘವೇಂದ್ರ ಕುಲಕರ್ಣಿ, ರಾಘವೇಂದ್ರ ಕಬ್ಬೂರ, ವೆಂಕಟೇಶ ಕುಲಕರ್ಣಿ  ಶ್ರೀದೇವಿ ಜೋಶಿ, ಶೋಭಾ ಕುಲಕರ್ಣಿ, ಹೇಮಾ ಕುಲಕರ್ಣಿ, ವಿಧ್ಯಾವತಿ ಕೃಷ್ಣಮೂರ್ತಿ,  ಸುಧಾ ಗುರಾಚಾರ್ಯ ಕೆ, ಅರ್ಚನಾ ಕಬ್ಬೂರ, ಪರಿಮಳ ಹಾಗೂ ವಾಸವಿ ಭಜನಾ ಮಂಡಳಿ ಸದಸ್ಯರು, ಮಂಜುನಾಥ ಗುಡ್ಡದ, ಮೊದಲಾದವರಿದ್ದರು.

  ಬೆಳಿಗ್ಗೆ ಮೃತ್ತಿಕಾ ರಾಯರ ವೃಂದಾವನ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಜರುಗಿತು 

ಸುದ್ದಿ ಓದಿ