ಒಂದೇ ದಿನ 4,405 ಹೊಸ ಕೋವಿಡ್ ಪ್ರಕರಣ ದಾಖಲಿಸಿದ ಫಿಲಿಪೈನ್ಸ್
ಮನಿಲಾ, ಅ. 25 ವಿವಿಧ ದೇಶಗಳಲ್ಲಿ ಕೋವಿಡ್ ಮತ್ತೆ ಕೇಕೆ ಹಾಕುವ ಲಕ್ಷಣ ಗೋಚರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಫಿಲಿಪೈನ್ಸ್ 4,405 ಹೊಸ ಕೋವಿಡ್ ಸೋಂಕುಗಳನ್ನು ದಾಖಲಿಸಿದ್ದು, ಒಟ್ಟು ಸಂಖ್ಯೆ 2,761,307 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದೇ ವೇಳೆ ಕೋವಿಡ್ -19 ತೊಡಕುಗಳಿಂದ 149 ಜನರು ಸಾವನ್ನಪ್ಪಿದ್ದು, ದೇಶದ ಸಾವಿನ ಸಂಖ್ಯೆಯನ್ನು 41,942 ಕ್ಕೆ ಹೆಚ್ಚಳವಾಗಿದೆ. ಮತ್ತೊಂದೆಡೆ 5 ಪ್ರಯೋಗಾಲಯಗಳು ಅಂಕಿ ಅಂಶ ನೀಡುವಲ್ಲಿ ವಿಫಲವಾಗಿವೆ ಎನ್ನಲಾಗಿದೆ.
ಈ ಕುರಿತು ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಮಾರಿಯಾ ರೊಸಾರಿಯೊ ವೆರ್ಗೆರಿ ಅವರು ಮಾತನಾಡಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಎಲ್ಲೆಡೆ ಉತ್ತಮ ನೈರ್ಮಲ್ಯಕ್ಕೆ ಗಮನಹರಿಸಲಾಗುವುದ, ಸೋಂಕಿನ ಸಂಖ್ಯೆ ಸದ್ಯಕ್ಕೆ ಕಡಿಮೆಯಿದ್ದರೂ, ಜನದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕಳೆದ ವಾರಾಂತ್ಯದಲ್ಲಿ, ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ನಂತರ ರಾಜಧಾನಿಯ ಮನಿಲಾ ಬೇ ಡಾಲಮೈಟ್ ಬೀಚ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸಾವಿರಾರು ಜನರು ಸೇರಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ ಮೂರನೇ ಅಲೆ ಅಪ್ಪಳಿಸಿ ಸೋಂಕು ಪ್ರಕರಣಗಳು ಉತ್ತುಂಗಕ್ಕೇರಿತ್ತು. ಸುಮಾರು 110 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಫಿಲಿಪೈನ್ಸ್, ಜನವರಿ 2020 ರಲ್ಲಿ ಸೋಂಕು ಪತ್ತೆಗಾಗಿ 21 ದಶಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದೆ.