ಇಂಗ್ಲೆಂಡ್: 600,000 ಕ್ಕೂ ಹೆಚ್ಚು ಜನತೆಗೆ ಫಿಜರ್-ಬಯೋಟೆಕ್ ಲಸಿಕೆ
ಲಂಡನ್,
ಡಿಸೆಂಬರ್ 25: ಬ್ರಿಟನ್ನಿನಲ್ಲಿ ಹೊಸ ಮಾದರಿಯ ಕೊರೋನ ಸೋಂಕು ಕಾಣಿಸಿಕೊಂಡ ನಂತರ ಜನತೆಯ
ಆರೋಗ್ಯಕ್ಕಾಗಿ ಈವರೆಗೆ 600,000 ಕ್ಕೂ ಹೆಚ್ಚು ಜನರಿಗೆ ಫಿಜರ್ ಲಸಿಕೆ ಹಾಕಲಾಗಿದೆ ಎಂದು ಯುಕೆ ಆರೋಗ್ಯ ಇಲಾಖೆ ಗುರುವಾರ ತಿಳಿಸಿದೆ.
"ಗಮನಾರ್ಹವಾದ
ವ್ಯವಸ್ಥಾಪನಾ ಸವಾಲುಗಳನ್ನು ನಿವಾರಿಸಲು ಎನ್‌ಎಚ್‌ಎಸ್ [ರಾಷ್ಟ್ರೀಯ ಆರೋಗ್ಯ ಸೇವೆ] ಯಿಂದ ಮಾಡಿದ ಪ್ರಯತ್ನಕ್ಕೆ ಜನರು ಧನ್ಯವಾದ ಹೇಳಿದ್ದಾರೆ ಯುಕೆನಾದ್ಯಂತ 616,933 ಜನರು ಕೊರೊನಾ
ಲಸಿಕೆಯನ್ನು ಪಡೆದಿದ್ದಾರೆ ಎಂದೂ ಸ್ಪುಟ್ನಿಕ್ ಸಚಿವಾಲಯವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇಂಗ್ಲೆಂಡ್‌ನಲ್ಲಿ 521,000 ಕ್ಕೂ ಹೆಚ್ಚು ಜನರಿಗೆ, ಸ್ಕಾಟ್‌ಲ್ಯಾಂಡ್‌ನಲ್ಲಿ 56,000 ಕ್ಕೂ ಹೆಚ್ಚು, ವೇಲ್ಸ್‌ನಲ್ಲಿ 22,000 ಕ್ಕೂ ಹೆಚ್ಚು ಮತ್ತು ಉತ್ತರ ಐರ್ಲೆಂಡ್‌ನಲ್ಲಿ 16,000 ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. "ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ, ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಾಗುತ್ತಿದ್ದಂತೆ ವ್ಯಾಕ್ಸಿನೇಷನ್ ಹಾಕುವ ಪ್ರಮಾಣ ಹೆಚ್ಚಾಗಲಿದೆ.
ಕಾರ್ಯಕ್ರಮ
ವಿಸ್ತರಣೆಯಾಗುತ್ತಿರುತ್ತದೆ . ಹೆಚ್ಚಿನ ಲಸಿಕೆಗಳನ್ನು ಆರೈಕೆ ಮನೆಗಳಿಗೆ ನೇರವಾಗಿ ತಲುಪಿಸಲಾಗುತ್ತದೆ ಎಂದೂ ಇಲಾಖೆ
ಹೇಳಿದೆ. ಕಳೆದ ವಾರ, ಯುಕೆ ಕರೋನ ಸೋಂಕಿನ ಹೊಸ ರೂಪಾಂತರ ಪತ್ತೆಯಾಗಿದೆ. ಇದು ಇತರ ಕೋವಿಡ್ ಸೋಂಕಿಗಿಂತಲೂ ಶೇಕಡಾ 70 ರಷ್ಟು ಹೆಚ್ಚು ವೇಗವಾಗಿ ಹರಡಲಿದೆ ಎನ್ನಲಾಗಿತ್ತು.
ಭಾರತ ಸೇರಿದಂತೆ ಅನೇಕ ದೇಶಗಳು ತಾತ್ಕಾಲಿಕವಾಗಿ ಯುಕೆ ಮತ್ತು
ಯುಕೆ ವಿಮಾನ ಸಂಚಾರವನ್ನು ನಿಷೇಧಿಸಿವೆ. ಫಿಜರ್ ಮತ್ತು
ಬಯೋಟೆಕ್ ಔಷಧೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶ ಯುಕೆಯಾಗಿದೆ.