ಪ್ರಸಿದ್ಧ ಬೌದ್ಧ ಸನ್ಯಾಸಿ ತಿಚ್ ನಾಟ್ ಹಾನ್ ಇನ್ನಿಲ್ಲ
ವಿಯೆಟ್ನಾಂ, ಜ 22 ಪ್ರಭಾವಿ ಝೆನ್ ಬೌದ್ಧ ಸನ್ಯಾಸಿ ತಿಚ್ ನಾಟ್
ಹಾನ್ ಶನಿವಾರ ನಿಧನರಾದರು. ವಿಶ್ವದ ಪ್ರಸಿದ್ಧ ಆಧ್ಯಾತ್ಮಿಕ ನಾಯಕ,
ಬರಹಗಾರ, ಕವಿ ಹಾಗೂ ಶಾಂತಿ ಕಾರ್ಯಕರ್ತ ವಿಯೆಟ್ನಾಂನ ಝೆನ್ ಮಾಸ್ಟರ್ ತಿಚ್
ನ್ಯಾಟ್ ಹನ್ ಅವರ ನಿಧನಕ್ಕೆ ಹಲವು ಜಾಗತಿಕ ಪ್ರಮುಖರು ಸಂತಾಪ
ವ್ಯಕ್ತಪಡಿಸಿದ್ದಾರೆ.
ತಿಚ್ ನಾಟ್ ಹಾನ್ ಅವರಿಗೆ 95 ವರ್ಷವಯಸ್ಸಾಗಿತ್ತು. ವಿಯೆಟ್ನಾಂನ
ಹುಯಿಯಲ್ಲಿರುವ ತು ಹಿಯು ದೇವಾಲಯದಲ್ಲಿ 95ನೇ ವರ್ಷದಲ್ಲಿ ಗುರುಗಳು ನಿಧನರಾದರು”
ಎಂದು ಅವರ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ.
ತಿಚ್ ನಾಟ್ ಹಾನ್ ತಮ್ಮ ಆಳವಾದ ಚಂತನೆ, ಬರಹಗಳಿಗೆ
ಹೆಸರುವಾಸಿಯಾಗಿದ್ದರು. ಅವರು ತಮ್ಮ ಹೆಚ್ಚಿನ ಸಮಯವನ್ನು ದೇಶಭ್ರಷ್ಟರಾಗಿ
ಕಳೆದಿದ್ದರು.
ಪ್ರಾಚೀನ ರಾಜಧಾನಿ ನಗರ ಅವರ ಜನ್ಮಸ್ಥಳ ಸೆಂಟ್ರಲ್ ಸಿಟಿ ಹ್ಯೂನಲ್ಲಿ ಕೊನೆಯ ದಿನಗಳನ್ನು ಕಳೆಯಲು ವಿಯೆಟ್ನಾಂಗೆ ಮರಳಿದ್ದರು. ಪಾಶ್ಚಿಮಾತ್ಯ ದೇಶಗಳಲ್ಲಿ ಬೌದ್ದ ಮತ ಮಾರ್ಗದರ್ಶಕರಾಗಿ ತಿಚ್ ನಾಟ್ ಹನ್ ಫ್ರಾನ್ಸ್ ನಲ್ಲಿ ಪ್ಲಮ್ ವಿಲೇಜ್ ಆಶ್ರಮ ಸ್ಥಾಪಿಸಿದ್ದರು. ಏಳು ಭಾಷೆಗಳನ್ನು ಮಾತನಾಡುತ್ತಿದ್ದ ತಿಚ್ ನಾಟ್ ಹಾನ್ ಅವರು 1960 ರ ದಶಕದ ಆರಂಭದಲ್ಲಿ ಅಮೆರಿಕಾದ ಪ್ರಿನ್ಸ್‌ಟನ್, ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ್ದರು.