ಟೆಕ್ಸಾಸ್: ಸಂತ್ರಸ್ತರ ಅಂತ್ಯಕ್ರಿಯೆಗೆ ಅನಾಮಧೇಯನಿಂದ $1.75 ಲಕ್ಷ ದಾನ
ವಾಷಿಂಗ್ಟನ್: ಮೇ 28: ಟೆಕ್ಸಾಸ್ ಪ್ರಾಂತ್ಯದ ಉವಾಲ್ಡೆಯಲ್ಲಿ ನಡೆದ ಶಾಲೆಯಲ್ಲಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಎಲ್ಲ ಸಂತ್ರಸ್ತರ ಅಂತ್ಯಕ್ರಿಯೆಗಾಗಿ ಅಮೆರಿಕಾದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರು 1.75 ಲಕ್ಷ ಡಾಲರ್ ದೇಣಿಗೆ ನೀಡಿದ್ದಾರೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗವರ್ನರ್ ಗ್ರೆಗ್ ಅಬಾಟ್, “ಅನಾಮಧೇಯ ದಾನಿಯೊಬ್ಬರು $175,000 ನೀಡಿದ್ದು, ಸಂತ್ರಸ್ತರ ಕುಟುಂಬಗಳಿಗೆ ಅಂತ್ಯಕ್ರಿಯೆಯ ಸೇವೆಗಳಿಗೆ ಮೀಸಲಿಡಲಾಗಿದೆ ಎಂದು ಶುಕ್ರವಾರ ತಿಳಿಸಿದರು. ದುರಂತಕ್ಕೆ ಸಂಬಂಧಿಸಿದ ಯಾವುದೇ ವೆಚ್ಚದ ಬಗ್ಗೆ ಚಿಂತಿಸಬೇಕಾಗಿಲ್ಲ” ಎಂದು ಹೇಳಿದರು.
ಮಂಗಳವಾರ ಉವಾಲ್ಡೆಯ ರಾಬ್ ಎಲಿಮೆಂಟರಿ ಶಾಲೆಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು 18 ವರ್ಷದ ಬಂದೂಕುಧಾರಿ ಸಾಲ್ವಡಾರ್ ರಾಮೋಸ್ ಗುಂಡಿಕ್ಕಿ ಹತ್ಯೆ ಮಾಡಿದ್ದನು.