ವಿಶ್ವದ ಅತಿದೊಡ್ಡ ಗೂಳಿ ಕಾಳಗದ ಮೇಲೆ ತಾತ್ಕಾಲಿಕ ನಿಷೇಧ!
ಮೆಕ್ಸಿಕೋ ಸಿಟಿ, ಮೇ 28 : ಮೆಕ್ಸಿಕೋದ ವಿಶ್ವದ ಅತಿದೊಡ್ಡ ಬುಲ್ರಿಂಗ್ ಪ್ಲಾಜಾದಲ್ಲಿ ಗೂಳಿ ಕಾಳಗವನ್ನು ಮೆಕ್ಸಿಕೋ ನ್ಯಾಯಾಲಯವು ತಾತ್ಕಾಲಿಕವಾಗಿ ನಿಷೇಧಿಸಿದೆ. ಫೋರ್ಬ್ಸ್ ಮೆಕ್ಸಿಕೋ ಈ ಬಗ್ಗೆ ವರದಿಯನ್ನು ನೀಡಿದೆ.
ವರದಿಯ ಪ್ರಕಾರ, ಗೂಳಿ ಕಾಳಗದ ಬಗ್ಗೆ ಸಿವಿಲ್ ಯೂನಿಯನ್ ಜಸ್ಟಿಸಿಯಾ ಜಸ್ಟಾ ದೂರು ದಾಖಲಿಸಿದ್ದಾರೆ. ಗೂಳಿ ಕಾಳಗವು ಮೆಕ್ಸಿಕೋ ನಗರದಲ್ಲಿ ಮಹಿಳೆಯರು ಹಿಂಸೆಯಿಂದ ಮುಕ್ತ ಜೀವನ ನಡೆಸುವ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಅಸೋಸಿಯೇಷನ್ ಹೇಳಿದೆ.
ಈ ತಡೆಯಾಜ್ಞೆ ತಾತ್ಕಾಲಿಕ ಎಂದು ವರದಿ ಹೇಳಿದೆ. ಜೂನ್ 2 ರಂದು, ಗೂಳಿ ಕಾಳಗವನ್ನು ನಿಷೇಧಿಸಬೇಕೆ ಅಥವಾ ಬೇಡವೇ ಅನ್ನೋ ಬಗ್ಗೆ ನ್ಯಾಯಾಧೀಶರು ನಿರ್ಧರಿಸಲಿದ್ದಾರೆ. ಪ್ಲಾಜಾ ಮೆಕ್ಸಿಕೋ ಬುಲ್ರಿಂಗ್ ಗ್ರೌಂಡ್ 40 ಸಾವಿರಕ್ಕೂ ಹೆಚ್ಚು ಜನರ ಸಾಮರ್ಥ್ಯವನ್ನು ಹೊಂದಿದೆ. ಈ ಬುಲ್ರಿಂಗ್ ಗ್ರೌಂಡ್ ಮೆಕ್ಸಿಕೊದ ರಾಜಧಾನಿ ಮೆಕ್ಸಿಕೊ ನಗರದಲ್ಲಿದೆ.