ದೇವಸ್ಥಾನಗಳು ಧಾರ್ಮಿಕ ನೆಲೆಗಟ್ಟನ್ನು ಕಲಿಸಿಕೊಡುತ್ತವೆ - ಚನ್ನವೀರ ಮಹಾಸ್ವಾಮಿಗಳು

ದೇವಸ್ಥಾನಗಳು ಧಾರ್ಮಿಕ ನೆಲೆಗಟ್ಟನ್ನು ಕಲಿಸಿಕೊಡುತ್ತವೆ - ಚನ್ನವೀರ ಮಹಾಸ್ವಾಮಿಗಳು Temples teach religious fundamentals - Channaveera Mahaswamy

ಲಕ್ಷ್ಮೇಶ್ವರ 23 : ದೇವಸ್ಥಾನಗಳು ಮಠ ಮಂದಿರಗಳು ಚರ್ಚುಗಳು ಮಸೀದಿಗಳು ನಮಗೆ ಧಾರ್ಮಿಕ ನೆಲೆಗಟ್ಟುಗಳನ್ನು  ಕಲಿಸಿಕೊಡುವ ಕೇಂದ್ರಗಳಾಗಿವೆ ಅದಕ್ಕಾಗಿ ನಮ್ಮ ಹಿಂದಿನ ಹಿರಿಯರು ಪ್ರತಿ ಓಣಿಗೆ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಿ ಹೋಗಿದ್ದಾರೆ ನಾವು ಪ್ರತಿದಿನ ಯಾವುದೇ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಓಣಿಯಲ್ಲಿರುವ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೋದರೆ ಸಾಕು ನಮ್ಮ ಕೆಲಸ ಈಡೇರುತ್ತವೆ ಅಂತ ಶಕ್ತಿ ಎಲ್ಲ ದೇವಸ್ಥಾನ ಗಳಲ್ಲಿ ಇವೆ ಅವುಗಳನ್ನು ನಾವು ಸುಂದರವಾಗಿ ನಿರ್ಮಾಣ ಮಾಡುವುದರೊಂದಿಗೆ ಅವುಗಳನ್ನು ಕಾಪಾಡಿಕೊಂಡು ಹೋಗುವುದು ಅಷ್ಟೇ ಎಲ್ಲರ ಜವಾಬ್ದಾರಿಯಾಗಿದೆ ಎಂದುಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಬಸ್ತಿಬಣದ ಉತ್ತರ ನಿಲಗಾರಪೇಟೆ ಓಣಿಯಲ್ಲಿ ಶಿವಸಮಸಾಲಿ ಸಮಾಜದ ವತಿಯಿಂದ ಜೀರ್ಣೋದ್ಧಾರಗೊಂಡ ಸಾಲೇಶ್ವರ ದೇವಸ್ಥಾನ ಲೋಕಾರೆ​‍್ಣ ಈಶ್ವರ ಬಸವಣ್ಣ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಶಿವಸಮಸಾಲಿ ಸಮಾಜದ ಕಮಿಟಿಯವರು ನಿರಂತರ ಪ್ರಯತ್ನ ಪಟ್ಟು ಸುಂದರ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಅವರು ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ ಮುಂದಿನ ಪೀಳಿಗೆ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಸಿಕೊಂಡು ಹೋಗುವುದು ಅವಶ್ಯವಾಗಿದೆ ಎಂದರು .

ಕಾರ್ಯಕ್ರಮದಲ್ಲಿ ಇನ್ನೂರ ಪೂಜ್ಯರಾದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು ಕೆರೇವಾಡಿ ಮಠ ಪೂಜ್ಯರು ಲೋಕಾರೆ​‍್ಣಗೊಂಡ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದರು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶಾಂತಪ್ಪ ಗುಡಿಗೇರಿ ಮಲ್ಲಪ್ಪ ಮಂಟಗಣಿ ಶಂಕರ ಕೋಳಿವಾಡ ಈಶ್ವರ ಮೆಡ್ಲೇರಿ ವಿಜಿ ಪಡಗೇರಿ ಯಲ್ಲವ್ವ ದುರ್ಗಣ್ಣವರ ಮಲ್ಲಪ್ಪ ಗುಡಗುಂಟೆ ರಾಜಣ್ಣ ಕುಂಬಿ ಬಸಣ್ಣ ಓದು ಮಹಾಬಲೇಶ್ವರ​‍್ಪ ಬೇವಿನಮರದ ಚಂದ್ರಣ್ಣ ಓದು ದೇವಸ್ಥಾನ ಕಮಿಟಿಯ ವೀರಭದ್ರ​‍್ಪ ಕಲಕೋಟಿ ರಾಜೇಶ್ ಗುಡಿಗೇರಿ ಜಗದೀಶ ಕಮಡೊಳ್ಳಿ ಮಲ್ಲಿಕಾರ್ಜುನ ಮಂಡಿಗನಾಳ ನಾಗರಾಜ ಕೊಂಚಗೇರಿ ಗದಿಗೆಪ್ಪ ಕೋಷ್ಠಿ ನಾಗರಾಜ ಅಗಡಿ ಕಳಕಪ್ಪ ಯಾಳಗಿ ಈಶ್ವರ​‍್ಪ ನೇಕಾರ ಚಂದ್ರು ನೀರಲಗಿಪಂಚ ಕಮಿಟಿಯ ಷಣ್ಮುಖಪ್ಪ ಕೋಳಿವಾಡ ಕುಬೇರ​‍್ಪ ಕೋಷ್ಠಿ ಮಲ್ಲಿಕಾರ್ಜುನ ದುರ್ಗದ ಶರಣಪ್ಪ ಗದಗ ಸೇರಿದಂತೆ ಶಿವಸಮಸಾಲಿ ಸಮಾಜದ ಹಿರಿಯ ಮುಖಂಡರು ಮತ್ತೆ ಬೇರೆ ಬೇರೆ ಊರುಗಳಿಂದ ಬಂದ ಸಮಾಜ ಬಾಂಧವರು ಓಣಿಯ ಹಿರಿಯರು ಮುಖಂಡರು ಮಹಿಳೆಯರು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಲೇಶ್ವರ ಕೃಪಾ ಆಶೀರ್ವಾದ ಪಡೆದು ಪ್ರಸಾದವನ್ನು ಸ್ವೀಕರಿಸಿದರು ರಾಜೇಶ್ ಗುಡಿಗೇರಿ, ಕುಬೇರ ಕೋಷ್ಠಿ ನಿರೂಪಿಸಿದರು ರವಿ ನೀರಲಗಿ ಸ್ವಾಗತಿಸಿದರು