ಅಂತರರಾಷ್ಟ್ರೀಯ

ಬುರ್ಜ್ ಖಲೀಫಾ ಮೇಲೆ ತೆಲಂಗಾಣದ 'ಬತುಕಮ್ಮ' ಅನಾವರಣ

ಬುರ್ಜ್ ಖಲೀಫಾ ಮೇಲೆ ತೆಲಂಗಾಣದ 'ಬತುಕಮ್ಮ' ಅನಾವರಣ

ದುಬೈ: ಅ, 24   ತೆಲಂಗಾಣದ ಸಾಂಪ್ರದಾಯಿಕ ಹಬ್ಬವಾದ ಬತುಕಮ್ಮ ಹಬ್ಬದ ವೈಭವವನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲಾಗಿದೆ.


ಭಾರತೀಯ ಕಾಲಮಾನ ರಾತ್ರಿ 9.40 ನಿಮಿಷಕ್ಕೆ ಮತ್ತು 10.40 ನಿಮಿಷಕ್ಕೆ ಸುಮಾರು ಮೂರು ನಿಮಿಷಗಳ ಕಾಲ ಬತುಕಮ್ಮ ಹಬ್ಬದ ವಿಡಿಯೋವನ್ನು ಬುರ್ಜ್ ಖಲೀಫಾ ಕಟ್ಟಡದ ಮೇಲೆ ಪ್ರದರ್ಶಿಸಲಾಯ್ತು.  


ಈ ದೃಶ್ಯದಲ್ಲಿ ತೆಲಂಗಾಣ ನಕ್ಷೆ, ಮುಖ್ಯಮಂತ್ರಿ ಕೆಸಿಆರ್ ಭಾವಚಿತ್ರ, ಜೈಹಿಂದ್, ಜೈ ತೆಲಂಗಾಣ, ಜೈ ಕೆಸಿಆರ್ ಎಂಬ ಘೋಷಣೆಗಳನ್ನೂ ಸಹ ಪ್ರದರ್ಶಿಸಲಾಯಿತು. ಇನ್ನು ಆ ವೇಳೆಯಲ್ಲಿ ಭಾಗವಹಿಸಿದ್ದ ತೆಲುಗು ಪ್ರವಾಸಿಗರು ಜೈ ಕಾರ ಹಾಕಿದರು.


ಬತುಕಮ್ಮ ಅನಾವರಣಗೊಳ್ಳುವ ವೇಳೆ ವಿಧಾನಪರಿಷತ್ ಸದಸ್ಯೆ ಹಾಗೂ ಸಿಎಂ ಕೆಸಿಆರ್ ಪುತ್ರಿ ಕವಿತಾ ಹಾಜರಿದ್ದರು. ಜೊತೆಗೆ ಅಲ್ಲಿನ ತೆಲಂಗಾಣ ಮಹಿಳೆಯರೊಂದಿಗೆ ಬತುಕಮ್ಮ ನೃತ್ಯ ಮಾಡಿ ಸಂತೋಷ ಪಟ್ಟರು.

ಸುದ್ದಿ ಓದಿ