ಬಾಗಲಕೋಟೆ

ಆದರ್ಶ ಶಿಕ್ಷಕ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕ ಬಿ. ಬಿ. ನಾಯ್ಕ

ಆದರ್ಶ ಶಿಕ್ಷಕ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾದ  ಶಿಕ್ಷಕ ಬಿ. ಬಿ. ನಾಯ್ಕ


ಬೀಳಗಿ 23:  ತಾಲೂಕಿನ ಗಲಗಲಿಯ ಬಸವೇಶ್ವರ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಮತ್ತು ಹೂಲಗೇರಿಯ ಗುರು ಕೃಪಾ ವಿದ್ಯಾವರ್ಧಕ ಸಂಸ್ಥೆ ಹಾಗೂ ಮಂಟೂರದ ಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕೊಡಮಾಡುವ ಆದರ್ಶ ಶಿಕ್ಷಕ ಸೇವಾರತ್ನ ಪ್ರಶಸ್ತಿಗೆ ಆಯ್ಕೆಯಾದ  ಶಿಕ್ಷಕ ಬಿ. ಬಿ. ನಾಯ್ಕ ಅವರನ್ನು ಅಮಲಝರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಡಿಎಂಸಿಯ ಸರ್ವ ಸದಸ್ಯರು ಹಾಗೂ ಶಾಲೆಯ ವಿದ್ಯಾರ್ಥಿಗಳು ಸನ್ಮಾನಿಸಿ ಶ್ರೀಯುತರ ಶೈಕ್ಷಣಿಕ ಸೇವೆಯನ್ನು ಅಭಿನಂದಿಸಿ, ಅವರ ಮುಂದಿನ ಸೇವಾ ಜೀವನಕ್ಕೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ವಿ. ಎಸ್‌. ಪಡತಾರೆ, ಎಸ್ಡಿಎಂಸಿ ಅಧ್ಯಕ್ಷ ವಾಸುದೇವ ಚಿಕ್ಕಿ, ಉಪಾಧ್ಯಕ್ಷ ಭೀಮಸಿ ತಳವಾರ, ಸದಸ್ಯರಾದ ಹನಮಂತ ಹೊಳೆಪ್ಪಗೋಳ, ಸತ್ಯಪ್ಪ ಸೊಕನಾದಗಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ