ಮುಧೋಳ

ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ ಇನ್ನಿಲ್ಲ

ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿ ಇನ್ನಿಲ್ಲ

ಮುಧೋಳ: ತಾಲೂಕಿನ ಚಿಂಚಖಂಡಿ ಬಿ.ಕೆ ಗ್ರಾಮದ ಗಾಂಧಿವಾದಿ ತಮ್ಮಣ್ಣಪ್ಪ ಪರ​‍್ಪ ಬುದ್ನಿ (93) ಮಂಗಳವಾರ ಬೆಳಿಗ್ಗೆ ನಿಧನರಾದರು.  

ಜೀವನದುದ್ದಕ್ಕೂ  ಸಮಾಜದಲ್ಲಿ ಜಾತ್ಯಾತೀತ ಮತ್ತು ಸಮಾನತೆ  ಬಯಸಿದ  ಚರಕ ಮತ್ತು ಖಾದಿ ಜೊತೆಗೆ ನಡೆದಾಡುವ  ಇರುವ  ಸದಾ ಖಾದಿದಾರಿಯಾಗಿದ್ದ ಇವರು ಗಾಂಧೀಜಿಯವರ ತತ್ವಾದರ್ಶದಲ್ಲಿ ಸಾಗಿದ್ದರು ಹಾಗೂ ವಿನೋಬಾ ಭಾವೆ, ಕರ್ನಾಟಕ ಗಾಂಧಿ ಎಂದೇ ಖ್ಯಾತಿಯ ನೀಲಕಂಠಜಿ ಗಣಾಚಾರಿವರ ನಿಕಟ ಒಡನಾಟದಲ್ಲಿದ್ದ ತಮ್ಮಣ್ಣಪ್ಪ ಖಾದಿ ಕೇಂದ್ರಗಳ ಸ್ಥಾಪನೆಯಲ್ಲಿ ಅವರು ಸಕ್ರೀಯವಾಗಿ ತೊಡಗಿಕೊಂಡಿದ್ದರು. ಗುಡ್ಡಗಾಡದಲ್ಲಿ ಇರುವ ಜನಸಾಮಾನ್ಯರಿಗೆ, ಬಡವರಿಗೆ ಶಿಕ್ಷಣ,ಸಂಸ್ಕಾರ ಕೊಟ್ಟು ಸಮಾಜದ ಮುಖ್ಯ ವಾಹಿನಿಗೆ ತಂದ ಇವರು,  

ಭೂಮಿ ಇಲ್ಲದ ಕೃಷಿಕರಿಗೆ 1950ರಲ್ಲಿ  ಭೂದಾನ ಚಳುವಳಿಯಲ್ಲಿ ಪಾಲ್ಗೊಂಡ ಈ ಭಾಗದ ಮೊದಲ ಕಾರ್ಯಕರ್ತರು, ಸರ್ವೋದಯ ಚಳುವಳಿಯಲ್ಲಿ ತೊಡಗಿಕೊಂಡಿದ್ದಲ್ಲದೆ  ಅಪ್ಪಟ ದೇಶ ಪ್ರೇಮಿಯಾಗಿದ್ದರು.  

ಅವರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ವಕೀಲ ಶಶಿದರ ಹಾಗೂ ರಾಮಕೃಷ್ಣ ಪುತ್ರರಲ್ಲಿ ಇಬ್ಬರು ಆಗಿದ್ದಾರೆ.    

ಸಂತಾಪ: ಗಾಂಧಿವಾದಿ ತಮ್ಮಣ್ಣಪ್ಪ ಬುದ್ನಿಯವರನಿಧನಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ,ಎಮ್ ಎಲ್ ಸಿಆರಿ​‍್ಬ. ತಿಮ್ಮಾಪೂರ,ಮಾಜಿ ಸಚಿವ ಎಸ್‌.ಆರ್‌.ಪಾಟೀಲ್, ಕಿಸಾನ್ಸೆಲ್ ಜಿಲ್ಲಾ ಘಟಕದ ಅಧ್ಯಕ್ಷ ನಂದಕುಮಾರಪಾಟೀಲ್,ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ,ಲೋಕಾಪೂರ ಆರಿ​‍್ಬ.ಜಿ ಕಾಲೇಜು ಪ್ರಾಚಾರ್ಯ ವಿ.ಬಿ.ಮಾಳಿ,ಕಾಶಿನಾಥ ಹುಡೇದ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಸೇರಿದಂತೆ ಜನಪ್ರತಿನಿಧಿಗಳು,ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.  


ಸುದ್ದಿ ಓದಿ