ಅಂತರರಾಷ್ಟ್ರೀಯ

ಅಮೆರಿಕಾದ ಆಯುಧಗಳೊಂದಿಗೆ ತಾಲಿಬಾನ್‌ ಶಕ್ತಿ ಪ್ರದರ್ಶನ...!

ಅಮೆರಿಕಾದ   ಆಯುಧಗಳೊಂದಿಗೆ   ತಾಲಿಬಾನ್‌   ಶಕ್ತಿ  ಪ್ರದರ್ಶನ...!

ಕಾಬೂಲ್‌, ನ 15: ಅಮೆರಿಕಾ,   ಇನ್ನತರ       ದೇಶಗಳ  ಸೇನಾ ಪಡೆಗಳು   ಬಿಟ್ಟುಹೋಗಿರುವ    ಶಸ್ತ್ರಾಸ್ತ್ರಗಳೊಂದಿಗೆ    ತಾಲಿಬಾನ್    ಭಾನುವಾರ   ತನ್ನ   ಶಕ್ತಿ  ಸಾಮರ್ಥ್ಯವನ್ನು  ಪ್ರದರ್ಶಿಸಿತು.  ಇವುಗಳಲ್ಲಿ ಅಮೆರಿಕಾ  ಶಸ್ತ್ರಸಜ್ಜಿತ ವಾಹನಗಳು,  ರಷ್ಯಾದ  ಹೆಲಿಕಾಪ್ಟರ್‌ಗಳು ಸೇರಿವೆ.

ಆಗಸ್ಟ್‌ನಲ್ಲಿ  ನಾಗರಿಕ  ಸರ್ಕಾರ ಪತನಗೊಂಡು  ತಾಲಿಬಾನ್  ಅಧಿಕಾರಕ್ಕೆ  ಬಂದ ನಂತರ   ಅವರು  ಈ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ತಾಲಿಬಾನ್‌  ಪಡೆಗಳ  250 ಮಂದಿ ಯೋಧರು  ಹೊಸದಾಗಿ  ತರಬೇತಿಯನ್ನು ಪೂರ್ಣಗೊಳಿಸಿದ  ಸಂದರ್ಭವಾಗಿ  ಸೈನಿಕರು  ಪರೇಡ್ ಆಯೋಜಿಸಿದ್ದರು

ಪಥ ಸಂಚಲನದಲ್ಲಿ   ಅಮೆರಿಕಾ  ನಿರ್ಮಿತ  ಎಂ.   117 ಶಸ್ತ್ರಸಜ್ಜಿತ ವಾಹನಗಳು,  ಎಂ  - 17 ಹೆಲಿಕಾಪ್ಟರ್‌ಗಳು,   ಅಮೆರಿಕಾ   ನಿರ್ಮಿತ  ಎಂ  4 ಅಸಾಲ್ಟ್ ಗನ್‌ಗಳನ್ನು ಪ್ರದರ್ಶಿಸಲಾಯಿತು. ಅಫ್ಘನ್ ರಾಷ್ಟ್ರೀಯ  ಪಡೆಯಲ್ಲಿ   ಸೇವೆ ಸಲ್ಲಿಸಿದ ಪೈಲಟ್‌ಗಳು,  ಮೆಕ್ಯಾನಿಕ್‌ಗಳನ್ನು  ಹೊಸದಾಗಿ  ತಮ್ಮ  ಪಡೆಗಳಿಗೆ  ನೇಮಕ ಮಾಡಿಕೊಳ್ಳಲಾಗಿದೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ . ತಾಲಿಬಾನ್ ಇತ್ತೀಚೆಗೆ ಮಿಲಿಟರಿ ಸಮವಸ್ತ್ರ  ಬಳಸಲು ಪ್ರಾರಂಭಿಸಿದೆ.   ಈ ಹಿಂದೆ ತಾಲಿಬಾನ್ ಹೋರಾಟಗಾರರು ಸಾಂಪ್ರದಾಯಿಕ ಉಡುಗೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ಪಾಕಿಸ್ತಾನ ಸರ್ಕಾರ,    ಉಗ್ರಗಾಮಿ  ಸಂಘಟನೆ ತೆಹ್ರೀಕ್-ಎ-ತಾಲಿಬಾನ್  ಪಾಕಿಸ್ತಾನದ   ನಡುವೆ   , ಅಫ್ಘನ್  ತಾಲಿಬಾನ್  ಮಧ್ಯಸ್ಥಿಕೆ ವಹಿಸಿತ್ತು. ಇದನ್ನು ಸ್ವತಃ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಖಿ  ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಜಿಯೋ ಟಿವಿಗೆ ನೀಡಿದ ಸಂದರ್ಶನದಲ್ಲಿ  ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.   ತಮ್ಮ  ದೇಶದ   ನೀತಿಯ ಭಾಗವಾಗಿ  ಈ ಕೆಲಸ ಮಾಡಿದ್ದೇವೆ  ಎಂದು ಹೇಳಿದ್ದಾರೆ.  ಶೀಘ್ರದಲ್ಲಿಯೇ     ಮಾತುಕತೆಗಳ ಫಲಿತಾಂಶ  ಲಭ್ಯವಾಗಲಿದೆ.  ಮಾತುಕತೆಗಳನ್ನು   ಅಫ್ಘಾನಿಸ್ತಾನದ   ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ನೇತೃತ್ವದಲ್ಲಿ ಸುಮಾರು ಎರಡು ವಾರಗಳ ಕಾಲ ನಡೆಸಲಾಯಿತು ಎಂದು ಹೇಳಲಾಗಿದೆ.

ಸುದ್ದಿ ಓದಿ