ಅಂತರರಾಷ್ಟ್ರೀಯ

ಟರ್ಕಿಯೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಲು ತಾಲಿಬಾನ್‌ ಯತ್ನ; ರಾಯಭಾರಿಯೊಂದಿಗೆ ಸಭೆ

ಟರ್ಕಿಯೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಲು ತಾಲಿಬಾನ್‌ ಯತ್ನ; ರಾಯಭಾರಿಯೊಂದಿಗೆ ಸಭೆ

ಮಾಸ್ಕೋ, ಸೆ 2: ತಾಲಿಬಾನ್‌ ವಕ್ತಾರ  ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ ಅವರು ಕತಾರ್‌ನ ಟರ್ಕಿಶ್ ರಾಯಭಾರಿ ಮುಸ್ತಫಾ ಗೋಕ್ಸು ಅವರನ್ನು ಬುಧವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು  ಕತಾರ್ ತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರ ಮೊಹಮ್ಮದ್ ನಯೀಮ್ ವಾರ್ಡಕ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಈ ಭೇಟಿಯಲ್ಲಿ ಅಫ್ಘಾನಿಸ್ತಾನದ ಪ್ರಸ್ತುತ ಮತ್ತು ಸಂಭಾವ್ಯ ಪರಿಸ್ಥಿತಿಯನ್ನು ಪಕ್ಷಗಳು ಚರ್ಚಿಸಲಾಯಿತು.

ಟರ್ಕಿ ಅಫ್ಗಾನ್‌ಗೆ ನೀಡುತ್ತಿರುವ ನೆರವನ್ನು ಮುಂದುವರಿಸಲಿವೆ ಎಂದು ಗೋಕ್ಸು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ತಾಲೀಬಾನ್‌ ನಿಯೋಗ ಕೂಡ ಟರ್ಕಿಯೊಂದಿಗೆ ಉತ್ತಮ ಸಂಬಂಧ ಮುಂದುವರಿಸುವ ಭರವಸೆ ವ್ಯಕ್ತಪಡಿಸಿದೆ.

ಆಗಸ್ಟ್ ಆರಂಭದಲ್ಲಿ, ಅಫ್ಘಾನಿಸ್ತಾನದ ಮೇಲೆ ತಮ್ಮ ಆಕ್ರಮಣವನ್ನು ತೀವ್ರಗೊಳಿಸಿದ್ದ ತಾಲಿಬಾನ್ ಆಗಸ್ಟ್ 15 ರಂದು ಕಾಬೂಲ್‌ ಅನ್ನು ಪ್ರವೇಶಿಸಿತು ಮತ್ತು ಆಡಳಿತದ ಮೇಲೆ ಹಿಡಿತ ಸಾಧಿಸಿತು.  ಮತ್ತು ಆಗಸ್ಟ್ 16 ರಂದು ಅಫ್ಗಾನಿಸ್ತಾನದಲ್ಲಿ ಯುದ್ಧ ಮುಗಿದಿದ್ದು, ದೇಶದಲ್ಲಿ ಹೊಸ ಸರ್ಕಾರ ರೂಪುಗೊಳ್ಳಲಿದೆ  ಎಂದು ಘೋಷಿಸಿತು. ಅವರ ನಿಯಂತ್ರಣದಲ್ಲಿಲ್ಲದ ಏಕೈಕ ಪ್ರಾಂತ್ಯವೆಂದರೆ  ಕಾಬೂಲ್‌ನ ಈಶಾನ್ಯದ ಪಂಜಶೀರ್.

ಈ ಬೆಳವಣಿಗೆ ನಂತರ ದೇಶದಲ್ಲಿ ನಿಯೋಜಿಸಲ್ಪಟ್ಟಿದ್ದ ಸೇನೆಯನ್ನು ಹಿಂಪಡೆದುಕೊಳ್ಳಲು ಅಮೆರಿಕ ಸಮ್ಮತಿಸಿತು. ಆಗಸ್ಟ್ 30 ರೊಳಗೆ ಅಪ್ಗಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದನ್ನು ಮತ್ತು 20 ವರ್ಷಗಳ ಕಾರ್ಯಾಚರಣೆಯನ್ನು ಕೊನೆಗೊಳಿಸುವುದಾಗಿ ಘೋಷಿಸಿತು. ಕಾಬೂಲ್ ವಿಮಾನ ನಿಲ್ದಾಣದ ಮೂಲಕ ದೇಶದಲ್ಲಿದ್ದ ವಿದೇಶಿಯರು ಮತ್ತು ಮಿತ್ರರಾಷ್ಟ್ರಗಳ ಸದಸ್ಯರನ್ನು ಸ್ಥಳಾಂತರಿಸಲಾಯಿತು. ನಂತರ ದೇಶ ಸಂಪೂರ್ಣವಾಗಿ ತಾಲಿಬಾನ್ ನ ನಿಯಂತ್ರಣಕ್ಕೆ ಒಳಪಟ್ಟಿತು.

ಸುದ್ದಿ ಓದಿ