ಕೆಎಲ್‌ಇ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಟ್ಯಾಲೆಂಟ್ ಟೆಸ್ಟ ರಾಜ್ಯದ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
Talent Test at KLE SCP College Free admission for PU students of the state
ಮಹಾಲಿಂಗಪುರ 20: ಸ್ಥಳೀಯ ಕೆಎಲ್‌ಇ ಸೈಸೈಟಿಯ ಎಸ್‌ಸಿಪಿ ಪದವಿ ಮಹಾವಿದ್ಯಾಲದಲ್ಲಿ ರಾಜ್ಯದ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಡಿಸೆಂಬರ 24ಬುಧವಾರಮುಂಜಾನೆ 9 ಗಂಟೆಗೆ ಕಾಲೇಜ ಅಡಿಟೋರಿಯಮ್ ನಲ್ಲಿ ರಾಜ್ಯಮಟ್ಟದ ಟಾಲೆಂಟ ಫೆಸ್ಟ್ *ವಿಸ್ಟಾ-2ಕೆ25* ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಬಿ.ಪಾಟೀಲ ಹೇಳಿದರು.
ಮಹಾವಿದ್ಯಾಲಯದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಯು ವಿದ್ಯಾರ್ಥಿಗಳಿಗೆ ಓದುವದನ್ನೇ ಹೆಚ್ಚಾಗಿ ಕಲಿಸಲಾಗುತ್ತದೆ.ಈ ಕಾರಣದಿಂದ ಅವರಿಗೆ ಪುಸ್ತಕ ಓದುವದನ್ನು ಹೊರತುಪಡಿಸಿ ಅವರ ಮುಂದಾಲೋಚನೆ,ವಿಚಾರ,ಕೌಶಲ್ಯಗಳು,ಪ್ರತಿಭೆ ಮತ್ತು ಕಲೆಗೆ ಪ್ರೋತ್ಸಾಹ ನೀಡುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಪಿಯು ನಲ್ಲಿ ಕಲೆ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು ಇದರಲ್ಲಿ ಸೈನ್ಸ್ ಎಕ್ಷೊ,ಟಾಲೆಂಟ ಟೆಸ್ಟ,ಕ್ವಿಜ್ವ್ ಮಾಸ್ಟರ್,ಅಡ್-ಮ್ಯಾಡ ಶೋ,ಪೋಸ್ಟರ್ ಪ್ರಜೇಂಟೇಶನ್,ವಿಡಿಯೋಗ್ರಾಫಿ,ಹಾಡು ಸ್ಪರ್ದೆ,ಡ್ಯಾನ್ಸ,ಸ್ಕಿಟ್,ಬೆಂಕಿಯಿಲ್ಲದೆ ಅಡುಗೆ ಮಾಡುವದು ಸೇರಿವೆ. ಈ ಕುರಿತು 45 ಮಹಾವಿದ್ಯಾಲಯಗಳಿಗೆ ಭೇಟಿ ನೀಡಿ ವಿಷಯ ತಿಳಿಸಿದ್ದೇವೆ.
ವಿಜಯಪುರ ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ತಮ್ಮ ಹೆಸರು ನೊಂದಾಯಿಸಿದ್ದಾರೆ.ಆಸಕ್ತರು ಕೂಡಲೇ ಆನಲೈನ್,ಫೋನ ಮುಖಾಂತರವೂ ನೋಂದಣಿ ಮಾಡಿಸಬಹುದು ಎಂದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಡಾ.ಎಸ್.ಡಿ.ಸೋರಗಾಂವಿ, ಸಿ.ಎಂ.ಐಗಳಿ, ಎಸ್.ಎಸ್.ಮುಗಳ್ಯಾಳ,ಎ.ಎಂ.ಉಗಾರೆ ಮುಂತಾದವರು ಇದ್ದರು. ಹೆಚ್ಚಿನ ಮಾಹಿತಿಗಾಗಿ ಎಸ್.ಎಸ್.ಮುಗಳ್ಯಾಳ 7204913101. ಎ.ಎಂ ಉಗಾರೆ 974335590.ಸಿ.ಎಂ ಅಲಗಲಿ 8050421143 ಈ ಮೋಬೈಲ ನಂಬರಗಳಿಗೆ ಸಂಪರ್ಕಿಸಬಹುದು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 