ಹುಕ್ಕೇರಿ

ಕೊರೊನಾ ವ್ಯಾಕ್ಸಿನ್ ಪಡೆದು ಕೋವಿಡ್ ದೂರವಿಡಿ: ನಿಡಸೋಸಿಶ್ರೀ

ಕೊರೊನಾ ವ್ಯಾಕ್ಸಿನ್ ಪಡೆದು ಕೋವಿಡ್ ದೂರವಿಡಿ: ನಿಡಸೋಸಿಶ್ರೀ

ಹುಕ್ಕೇರಿ18: ದೇಶದಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ ನಮ್ಮ ಸ್ವದೇಶಿ ವ್ಯಾಕ್ಸಿನ ಬಹಳಷ್ಟು ಪರಿಣಾಮಕಾರಿಯಾಗಿದೆ. ತಪ್ಪದೆ ಎಲ್ಲರೂ ವ್ಯಾಕ್ಸಿನ ಪಡೆದು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕಿದೆ ಎಂದು ನಿಡಸೋಸಿ ದುರುದುಂಡೇಶ್ವರ ಮಠದ ಪಂಚಮಿ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಕೊರೊನಾ ವ್ಯಾಕ್ಸಿನ ಪಡೆದು ಮಾತನಾಡಿದರು. 

ಕೊರೊನಾ ವ್ಯಾಕ್ಸಿನ ಪಡೆಯಲು ತುಂಬಾ ಜನ ಹಿಂದೇಟು ಹಾಕುತ್ತಿದ್ದಾರೆ ಈಗಾಗಲೆ ರಾಷ್ಟ್ರಪತಿಗಳಿಂದ ಹಿಡಿದು ಪ್ರಧಾನಿ ದೇಶದ ದೊಡ್ಡ ದೊಡ್ಡ ಸ್ವಾಮೀಜಿಗಳು ವ್ಯಾಕ್ಸಿನ ಪಡೆದು ಮಾದರಿಯಾಗಿದ್ದಾರೆ. ಹಾಗಾಗಿ ಯಾರು ಸಹ ಹೆದರದೆ ವ್ಯಾಕ್ಸಿನ ಪಡೆದು ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದಿದ್ದಾರೆ.

ದೇಶದಲ್ಲಿ ಇನ್ನು ಕೊರೊನಾ ಎರಡನೆ ಅಲೆ ಶುರುವಾಗಿದೆ ಟಿವಿ ಮಾಧ್ಯಮಗಳು ಎಚ್ಚರಿಕೆ ವಹಿಸುವಂತೆ ಸಂದೇಶಗಳನ್ನು ನೀಡಲಾಗುತ್ತಿದೆ. ಆದ್ರು ಸಹ ಜನ ಎಚ್ಚೆತ್ತುಕೊಳ್ಳುತ್ತಿಲ್ಲಾ. ಈಗಲೂ ಮಾಸ್ಕ್ ಸಾಮಾಜಿಕ ಅಂತರ ಮರೆತು ಜನ ಮೈ ಮರೆಯುತ್ತಿದ್ದಾರೆ ಹೀಗೆ ಮುಂದುವರೆದ್ರೆ ರೋಗವನ್ನ ನಾವೇ ಮನೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬಂದಾಗ ಯಾರು ಏನು ಮಾಡಲು ಸಾಧ್ಯವಾಗಲ್ಲಾ. ಹಾಗಾಗಿ ಈಗಾಗಲೇ ಎಚ್ಚೆತ್ತಕೊಂಡು ಪ್ರತಿಯೊಬ್ಬರು ಮಾಸ್ಕ್ ಸಾಮಾಜಿಕ ಅಂತರದ ಜೊತೆಗೆ ವ್ಯಾಕ್ಸಿನ ಪಡೆಯಬೇಕು ಎಂದು ಕರೆ ಕೊಟ್ಟಿದ್ದಾರೆ.

ಇನ್ನೂ ಸ್ವಾಮೀಜಿ ಅವರನ್ನು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹೂ ಗುಚ್ಚ ನೀಡಿ ಸ್ವಾಗತಿಸಿದರು. 

ಮುಖ್ಯ ವೈದ್ಯಾಧಿಕಾರಿ ಎಮ್ ಎಮ್ ನರಸನ್ನವರ, ಡಾ, ಆರ್ ಎ ಮಕಾನದಾರ, ಡಾ,  ದೀಪಕ ಅಂಬಲಿ, ಡಾ, ಪ್ರಗತಿ ಬೋರಗಾಂವಿ, ಸಂತೋಷ ಕಟಗೇರಿ, ಮಂಜುನಾಥ ಬೇಟಗೇರಿ, ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿ ಓದಿ