ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡನ್ ಪ್ರಚಾರ, ಫ್ಲೋರಿಡಾದಲ್ಲಿ ಟ್ರಂಪ್ ಮತ ಚಲಾವಣೆ
ವಾಷಿಂಗ್ಟನ್, ಅ 24 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರು ಸ್ವಿಂಗ್ ರಾಜ್ಯಗಳಲ್ಲಿ ಪ್ರಚಾರ ಸಮಾವೇಶಗಳನ್ನು ನಡೆಸುವ ಮೊದಲು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಖುದ್ದಾಗಿ ಮತ ಚಲಾಯಿಸಲಿದ್ದಾರೆ ಎಂದು ರಾಯಿಟರ್ಸ್ ಶನಿವಾರ ವರದಿ ಮಾಡಿದೆ.ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಪೆನ್ಸಿಲ್ವೇನಿಯಾದಲ್ಲಿ ಡ್ರೈವ್-ಇನ್ ಸಮಾವೇಶಗಳನ್ನು ನಡೆಸಲಿದ್ದಾರೆ, ಉಭಯ ಅಭ್ಯರ್ಥಿಗಳಿಗೂ ಇದು ಪ್ರಮುಖವಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣಾ ಯೋಜನೆಯ ಪ್ರಕಾರ, ನವೆಂಬರ್ 3 ರ ಚುನಾವಣೆಗೆ ಕೇವಲ 10 ದಿನಗಳ ಒಳಗೆ, ಸುಮಾರು 53.5 ಮಿಲಿಯನ್ ಅಮೆರಿಕನ್ ನಾಗರಿಕರು ಆರಂಭಿಕ ಮತಗಳನ್ನು ಚಲಾಯಿಸಿದ್ದಾರೆ, ಇದು ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ದಾಖಲೆಯ ವೇಗವನ್ನು ಗುರುತಿಸಿದೆ. ಕಳೆದ ವರ್ಷ, ಟ್ರಂಪ್ ತಮ್ಮ ಶಾಶ್ವತ ನಿವಾಸ ಮತ್ತು ಮತದಾರರ ನೋಂದಣಿಯನ್ನು ನ್ಯೂಯಾರ್ಕ್ ನಿಂದ ಫ್ಲೋರಿಡಾಕ್ಕೆ ಸ್ಥಳಾಂತರಿಸಿದ್ದರು. ಇದು ಅವರ ಮರುಚುನಾವಣೆಗೆ ನಿರ್ಣಾಯಕ ರಾಜ್ಯವಾಗಿದೆ. ಮತದಾನದ ನಂತರ, ಅಧ್ಯಕ್ಷರು ಉತ್ತರ ಕೆರೊಲಿನಾ, ಓಹಿಯೋ ಮತ್ತು ವಿಸ್ಕಾನ್ಸಿನ್‌ನಲ್ಲಿ ರ್ಯಾಲಿಗಳನ್ನು ನಡೆಸಲು ಸಜ್ಜಾಗಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಬಿಡೆನ್ ಅವರ ಯೋಜಿತ ರ್ಯಾಲಿಗಳು ಫಿಲಡೆಲ್ಫಿಯಾದ ಉತ್ತರದ ಬಕ್ಸ್ ಕೌಂಟಿ ಮತ್ತು ಲುಜೆರ್ನ್ ಕೌಂಟಿಯಲ್ಲಿ ಅವರ ಜನ್ಮಸ್ಥಳವಾದ ಸ್ಕ್ರಾಂಟನ್ ಬಳಿ ನಡೆಯಲಿದೆ ಇತ್ತೀಚಿನ ರಾಯಿಟರ್ಸ್ / ಇಪ್ಸೋಸ್ ಸಮೀಕ್ಷೆಯಲ್ಲಿ ಡೆಮೋಕ್ರಾಟಿಕ್ ಅಭ್ಯರ್ಥಿಯ ರೇಟಿಂಗ್ ಟ್ರಂಪ್‌ಗಿಂತ ಶೇಕಡ ನಾಲ್ಕರಷ್ಟು ಹೆಚ್ಚಾಗಿದೆ ಎಂದು ತೋರಿಸಿದೆ.