ನ್ಯಾಟೋಗೆ ಸೇರಲು ಮುಂದಾದ ಸ್ವೀಡನ್!
ಸ್ಟಾಕ್‌ಹೋಮ್: ಮೇ 12: ಸ್ವೀಡನ್ ಮೇ 16 ರಂದು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಲು ಮುಂದಾಗಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ‘ಎಕ್ಸ್‌ಪ್ರೆಸ್’ ಪತ್ರಿಕೆ ಗುರುವಾರ ಈ ಮಾಹಿತಿ ನೀಡಿದೆ.ಸ್ವೀಡಿಷ್ ಪ್ರಧಾನ ಮಂತ್ರಿ ಮ್ಯಾಗ್ಡಲೀನಾ ಆಂಡರ್ಸನ್ ಸೋಮವಾರ ಹೆಚ್ಚುವರಿ ಸರ್ಕಾರಿ ಸಭೆಯನ್ನು ಕರೆಯಲು ತೀರ್ಮಾನಿಸಿದ್ದಾರೆ. ಈ ಮಹತ್ವದ ಸಭೆಯ ಬಳಿಕ ನ್ಯಾಟೋಗೆ ಸೇರಲು ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.