ಅಮೆರಿಕದಲ್ಲಿ ಸೂಪರ್ ಹಾರ್ನೆಟ್ ಪತನ, ಪೈಲಟ್ ಸಾವು
ವಾಷಿಂಗ್ಟನ್: ಜೂನ್ 04 : ಅಮೆರಿಕದ ಆಗ್ನೇಯ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಅಮೆರಿಕ ನೌಕಾಪಡೆಯ ಯುದ್ಧ ವಿಮಾನ ಪತನಗೊಂಡು ಪೈಲಟ್ ಮೃತಪಟ್ಟಿದ್ದಾರೆ. ಸೇನಾ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಶನಿವಾರ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿವೆ.
ಕೆಎಬಿಸಿ ಟಿವಿ ಚಾನೆಲ್ ತನ್ನ ವರದಿಯಲ್ಲಿ, ಎಫ್/ಎ-18ಇ ಸೂಪರ್ ಹಾರ್ನೆಟ್ ಫೈಟರ್ ವಿಮಾನವು ಶುಕ್ರವಾರ ಮಧ್ಯಾಹ್ನ ಲೆಮೂರ್ ನೌಕಾ ವಿಮಾನ ನಿಲ್ದಾಣದಿಂದ ಹೊರಟು ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ನಗರದಲ್ಲಿ ಪತನಗೊಂಡಿದೆ ಎಂದು ವರದಿ ಮಾಡಿದೆ. ವಿಮಾನವು ಮಧ್ಯಾಹ್ನ 2.30 ಕ್ಕೆ (ಸ್ಥಳೀಯ ಕಾಲಮಾನ) ಪತನಗೊಂಡಿದೆ ಎಂದು ಹೇಳಲಾಗಿದೆ. ನೌಕಾ ಭದ್ರತಾ ಪಡೆಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಯುದ್ಧವಿಮಾನ ಅಪಘಾತಗೊಂಡ ಸ್ಥಳದಲ್ಲಿ ನಿಯೋಜಿಸಲಾಗಿದೆ. ಅಪಘಾತಕ್ಕೆ ಕಾರಣಗಳು ಇನ್ನಷ್ಟೇ ತಿಳಿದು ಬರಬೇಕಿದ್ದು, ತನಿಖೆ ಮುಂದುವರಿದಿದೆ.