ಪೂರ್ವ ಕಾಂಗೋದಲ್ಲಿ ಬಾರ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 6 ಜನ ಸಾವು
ಬೆನಿ: ಡಿ, 26: ಕ್ರಿಸ್‌ಮಸ್ ಆಚರಣೆಗೆಂದು ರೆಸ್ಟೋರೆಂಟ್ ಮತ್ತು ಬಾರ್ನಲ್ಲಿ ಸೇರಿದ್ದ ಜನರ ಗುಂಪಿನ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಇಸ್ಲಾಮಿಕ್ ಉಗ್ರಗಾಮಿಗಳು ಸಕ್ರಿಯವಾಗಿರುವ ಪೂರ್ವ ಕಾಂಗೋಲೀಸ್ ಪಟ್ಟಣದ ಬೆನಿಯಲ್ಲಿ ಕನಿಷ್ಠ ಆರು ಮಂದಿಯನ್ನು ಸಾವಿಗೀಡಾಗಿದ್ದಾರೆ.
ಬಾಂಬ್ ಸ್ಫೋಟಗೊಂಡ ಸ್ವಲ್ಪ ಸಮಯದ ನಂತರ ಭಾರೀ ಗುಂಡಿನ ಸದ್ದು ಮೊಳಗಿದೆ. ಭಯಭೀತರಾದ ಜನ ಅಲ್ಲಿಂದ ಓಡಿ ಬಂದಿದ್ದಾರೆ. ಇಸ್ಲಾಮಿಕ್ ಉಗ್ರ ಸಂಘಟನೆಗಳು ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಬೇನಿಯ ಮತ್ತೊಂದು ಬಾರ್ನಲ್ಲಿ ನಡೆದ ಆತ್ಯಾಹುತಿ ಬಾಂಬ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದ್ರೆ ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಇತ್ತೀಚಿನ ಹಿಂಸಾಚಾರವು ಬಂಡುಕೋರರಿಂದ ಈಗಾಗಲೇ ವರ್ಷಗಳಿಂದ ಪೀಡಿತ ಪ್ರದೇಶದಲ್ಲಿ ಧಾರ್ಮಿಕ ಉಗ್ರವಾದವು ಹಿಡಿತ ಸಾಧಿಸಿದೆ ಎಂಬ ಭಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಉತ್ತರ ಕಿವು ಗವರ್ನರ್‌ನ ವಕ್ತಾರ ಜನರಲ್ ಸಿಲ್ವೈನ್ ಎಕೆಂಗೆ, ಭದ್ರತಾ ಸಿಬ್ಬಂದಿಗಳು ಬಾಂಬರ್ ಅನ್ನು ಕಿಕ್ಕಿರಿದ ಬಾರ್‌ಗೆ ಪ್ರವೇಶಿಸದಂತೆ ತಡೆದರು ಮತ್ತು ಆ ವ್ಯಕ್ತಿಯು ಪ್ರವೇಶದ್ವಾರದಲ್ಲಿ ಸ್ಫೋಟಕಗಳನ್ನು ಸ್ಫೋಟಿಸಿದನು ಎಂದು ಹೇಳಿದರು.
ಪೊಲೀಸ್ ಕರ್ನಲ್ ಆಗಿರುವ ಮೇಯರ್ ನಾರ್ಸಿಸೆ ಮುಟೆಬಾ ಅವರ ಪ್ರಕಾರ, ಸತ್ತವರಲ್ಲಿ ಇಬ್ಬರು ಮಕ್ಕಳಿದ್ದಾರೆ. ಕನಿಷ್ಠ 13 ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಈ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಕಂಡುಹಿಡಿಯಲು ತನಿಖೆಗಳು ನಡೆಯುತ್ತಿವೆ” ಎಂದು ಅವರು ಹೇಳಿದರು.