ಅಂತರರಾಷ್ಟ್ರೀಯ

ಅಫ್ಘಾನಿಸ್ತಾನದಲ್ಲಿ ಮಸೀದಿ ಮೇಲೆ ಅತ್ಮಾಹುತಿ ದಾಳಿ; 46 ಸಾವು

ಅಫ್ಘಾನಿಸ್ತಾನದಲ್ಲಿ ಮಸೀದಿ ಮೇಲೆ ಅತ್ಮಾಹುತಿ ದಾಳಿ; 46 ಸಾವು

ಕಾಬೂಲ್, ಅ 9:  ಅಫ್ಘಾನಿಸ್ತಾನದ ಈಶಾನ್ಯ   ಪ್ರಾಂತ್ಯದ     ಕುಂದುಜ್‌  ನಗರದಲ್ಲಿ     ಶಿಯಾ    ಸಮುದಾಯದ  ಮಸೀದಿಯೊಂದರ ಮೇಲೆ   ನಡೆದ    ಆತ್ಮಾಹುತಿ  ದಾಳಿ ಯಲ್ಲಿ   ಕನಿಷ್ಠ  46 ಮಂದಿ ಮೃತಪಟ್ಟು,   ಹಲವು  ಮಂದಿ  ಗಾಯಗೊಂಡಿರುವ  ಘಟನೆ  ಶುಕ್ರವಾರ ನಡೆದಿದೆ.

ಇಸ್ಲಾಮಿಕ್​ ಸ್ಟೇಟ್ಸ್  ​​ ಭಯೋತ್ಪಾದಕ  ಸಂಘಟನೆ    ಕೃತ್ಯದ  ಹೊಣೆ   ಹೊತ್ತುಕೊಂಡಿದೆ. 

ಶುಕ್ರವಾರ   ಮಧ್ಯಾಹ್ನದ ಪ್ರಾರ್ಥನೆ   ಸಮಯದಲ್ಲಿ ಮಸೀದಿಯಲ್ಲಿ ಸ್ಫೋಟ  ನಡೆಸಲಾಗಿದೆ. 

ಶಿಯಾ ಹಾಗೂ  ತಾಲಿಬಾನಿಗಳನ್ನು ಗುರಿಯಾಗಿಸಿ  ಕೃತ್ಯ  ಎಸಗಲಾಗಿದೆ  ಎಂದು ಇಸ್ಲಾಮಿಕ್​ ಸ್ಟೇಟ್ಸ್​​ ಹೇಳಿಕೊಂಡಿದ್ದು, ದಾಳಿ ನಡೆಸಿದ ವ್ಯಕ್ತಿಯನ್ನು ಉಯ್ಘರ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಗುರುತಿಸಲಾಗಿದೆ.

ಸುದ್ದಿ ಓದಿ