ಅಂತರಿಕ್ಷಯಾನ ಕೈಗೊಂಡ 2ನೇ ಭಾರತೀಯ ಹೆಗ್ಗಳಿಕೆಗೆ ಪಾತ್ರರಾದ ಶುಭಾಂಶು
Subhanshu becomes the 2nd Indian to undertake spaceflight
ನವದೆಹಲಿ 25: ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನೊಳಗೊಂಡ ಸ್ಪೇಸ್ ಎಕ್ಸ್ ನ ಫಾಲ್ಕನ್ 9 ರಾಕೆಟ್ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ (ಜೂನ್ 25) ಮಧ್ಯಾಹ್ನ 12-01 ಗಂಟೆಗೆ ನಭಕ್ಕೆ ಚಿಮ್ಮಿದ್ದು, ಇದರೊಂದಿಗೆ ಸುಮಾರು 40 ವರ್ಷದ ನಂತರ ಬಾಹ್ಯಾಕಾಶ ಯಾನ ಕೈಗೊಂಡ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಿದ್ದಾರೆ.
ಒಟ್ಟು
ಆರು ಬಾರಿ ಮುಂದೂಡಿಕೆಯಾಗಿದ್ದ ಬಾಹ್ಯಾಕಾಶ ಯಾನ ಬುಧವಾರಕ್ಕೆ ನಿಗದಿಯಾಗಿತ್ತು. ಆದರೆ ಕೊನೆಯ
ಕ್ಷಣದಲ್ಲಿ ವಿಂಡ್ ಡಾಟಾ ಅಪ್ ಲೋಡ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಉಡ್ಡಯನ ಒಂದು ಗಂಟೆ ವಿಳಂಬವಾಗಿದ್ದು, ಬಳಿಕ ಶೀಘ್ರವೇ ಸಮಸ್ಯೆ ಪರಿಹರಿಸಲಾಗಿತ್ತು.
ನಂತರ
ನಿರೀಕ್ಷೆಯಂತೆ 12-01ಕ್ಕೆ ಫಾಲ್ಕನ್ 9 ರಾಕೆಟ್ ನಭಕ್ಕೆ ನೆಗೆದಿತ್ತು. ಶುಕ್ಲಾ ಸೇರಿದಂತೆ ನಾಲ್ವರನ್ನು ಹೊತ್ತಯ್ದಿರುವ ಈ ಡಾಕ್ ಜೂನ್
26ರಂದು ಸಂಜೆ 4-30ಕ್ಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪುವ ನಿರೀಕ್ಷೆ ಇದೆ.
ಗ್ರೂಪ್
ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಕೈಗೊಂಡ ಭಾರತದ ಎರಡನೇ ಗಗನಯಾತ್ರಿಯಾಗಿದ್ದಾರೆ. 1984ರಲ್ಲಿ ಭಾರತದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ರಷ್ಯಾದ ಗಗನನೌಕೆಯಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುವ ಮೂಲಕ ಇತಿಹಾಸ ಬರೆದಿದ್ದರು.
1949ರ
ಜನವರಿ 13ರಂದು ರಾಕೇಶ್ ಶರ್ಮಾ ಪಂಜಾಬ್ ನ ಪಟಿಯಾಲಾದಲ್ಲಿ ಜನಿಸಿದ್ದರು.
ಹೈದರಾಬಾದ್ ನ ಸೈಂಟ್ ಜಾರ್ಜ್
ಶಾಲೆಯಲ್ಲಿ ಶಿಕ್ಷಣ ಪಡೆದ ನಂತರ ನಿಜಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಬಳಿಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರ್ಪಡೆಯಾಗಿದ್ದು, 1966ರಲ್ಲಿ ವಾಯಪಡೆ ಸೇರ್ಪಡೆಗೊಂಡಿದ್ದರು. 1970ರಲ್ಲಿ ಶರ್ಮಾ ಅವರಿಗೆ ಭಾರತೀಯ ವಾಯಪಡೆಯ ಪೈಲಟ್ ಆಗಿ ಪದನ್ನೋತಿ ನೀಡಲಾಗಿತ್ತು. 1971ರ ಬಾಂಗ್ಲಾದೇಶ್ ಲಿಬರೇಶನ್
ಯುದ್ಧದ ಸಂದರ್ಭದಲ್ಲಿ ಮಿಗ್ 21 ಯುದ್ಧ ವಿಮಾನದ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. ರಾಕೇಶ್ ಶರ್ಮಾ ಅವರು ತಮ್ಮ ಸಾಧನೆಗಾಗಿ ಪ್ರತಿಷ್ಠಿತ ಅಶೋಕ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 