ಅಂತರರಾಷ್ಟ್ರೀಯ

ಅಮೆರಿಕದ ಕೆರೊಲಿನಾದ ಶಾಲೆಯಲ್ಲಿ ಗುಂಡಿನ ದಾಳಿ; ಓರ್ವ ವಿದ್ಯಾರ್ಥಿ ಸಾವು

ಅಮೆರಿಕದ ಕೆರೊಲಿನಾದ ಶಾಲೆಯಲ್ಲಿ ಗುಂಡಿನ ದಾಳಿ; ಓರ್ವ ವಿದ್ಯಾರ್ಥಿ ಸಾವು

ವಾಷಿಂಗ್ಟನ್, ಸೆ 2: ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಪ್ರೌಢಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ವಿನ್ ಸ್ಟನ್-ಸೇಲಂ ನಗರದ ಮೌಂಟ್ ತಬೋರ್ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ವೇಳೆಗೆ ಗುಂಡಿನ ದಾಳಿ ನಡೆದಿದೆ.

ವಿನ್ ಸ್ಟನ್-ಸೇಲಂ ಪೊಲೀಸ್ ವಿಭಾಗದ ಮುಖ್ಯಸ್ಥೆ ಕ್ಯಾಟ್ರಿನಾ ಥಾಂಪ್ಸನ್ ಸುದ್ದಿಗೋಷ್ಠಿಯಲ್ಲಿ ಢೀ ಮಾಹಿತಿ ನೀಡಿದ್ದು, ವಿದ್ಯಾರ್ಥಿಯೆಂದು ಭಾವಿಸಲಾಗಿರುವ ಈ ಶಂಕಿತನನ್ನು ಇನ್ನೂ ಬಂಧಿಸಲಾಗಿಲ್ಲ ಎಂದರು.

ಗುಂಡೇಟಿನಿಮದ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ತಕ್ಷಣ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್‌ಗೆ ಸಾಗಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಎಲ್ಲಾ ಇತರ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಫಾರ್ಸಿತ್ ಕೌಂಟಿ ವಕ್ತಾರ ಕ್ರಿಸ್ಟಿನಾ ಹೋವೆಲ್ ಸಿಎನ್ ಎನ್ ಗೆ ತಿಳಿಸಿದರು.

ಸಿಎನ್ಎನ್ ವರದಿಯ ಪ್ರಕಾರ ಉತ್ತರ ಕೆರೊಲಿನಾ ಪ್ರೌಡಶಾಲೆಯಲ್ಲಿ ಈ ವಾರ ನಡೆದ ಎರಡನೇ ಶೂಟಿಂಗ್ ಪ್ರಕರಣ. ಇದಕ್ಕೂ ಮೊದಲು ವಿಲ್ಮಿಂಗ್ಟನ್‌ನಲ್ಲಿ ಗುಂಡಿನ ದಾಳೆ ನಡೆದಿತ್ತು.

ಸುದ್ದಿ ಓದಿ