ವಿದ್ಯಾರ್ಥಿ/ವಿದ್ಯಾರ್ಥಿನಿಯರ ಗುರುವಂದನಾ ಕಾರ್ಯಕ್ರಮ
ಹುಕ್ಕೇರಿ 18: ನಗರದ ಕಾಡಸಿದ್ಧೇಶ್ವರ ಪ್ರೌಢ ಶಾಲೆಯ 1986-87 ನೇಯ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪುನರ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ರವಿವಾರ (ದಿ.18) ದಂದು ಮಹಾವೀರ ಶಿಕ್ಷಣ ಸಂಸ್ಥೆಯ ಪ್ರಾಂಗಣದಲ್ಲಿ ಹುಕ್ಕೇರಿ ಹಿರೇಮಠದ ಶಿವಬಸವ ಸ್ವಾಮಿಗಳ ಸಾನಿಧ್ಯ ಹಾಗೂ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ನಿಲಜಗಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನೂರಾರು ಶಾಲೆಯ ಮಾಜಿ ವಿದ್ಯಾರ್ಥಿಗಳು ಹಾಗೂ ಅವರಿಗೆ ಭೋದನೆ ಮಾಡಿದ ಗುರು ವೃಂದ ಸಾಕ್ಷಿಯಾದರು.
ಕಾಡಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ 1986-87 ನೇಯ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು 35 ವರ್ಷಗಳ ನಂತರ ಎಲ್ಲರೂ ಒಗ್ಗೂಡಿ ಪುನರ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮನ್ನು ಹಮ್ಮಿಕೊಂಡಿದ್ದರು. ತಮ್ಮ ಜೀವನಕ್ಕೆ ದಾರಿ ದೀಪವಾಗಿ ಮಾರ್ಗದರ್ಶನ ಮಾಡಿದ ಗುರುಗಳು ಹಾಗೂ ಗುರುಮಾತೆಯರು ಹಾಗೂ ಸಿಬ್ಬಂದಿ ವರ್ಗ ಹಾಗೂ ಸಹಪಾಠಿಗಳಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತÀ ಯೋಧರನ್ನು ಅಭಿನಂದಿಸಿ, ನೆನಪಿನ ಕಾಣಿಕೆ ನೀಡಿ ಸತ್ಕಾರ ಮಾಡುವದರೊಂದಿಗೆ ಗೌರವಿಸಲಾಯಿತು.
ಶಿಕ್ಷಕ ಎಸ್.ಎಸ್.ಹವಾಲ್ದ್ದಾರ, ಎ.ಬಿ.ಪಾಟೀಲ, ಜಿ.ಆರ್.ಶೆಟ್ಟಿ, ಎಸ್.ಬಿ.ಬುರ್ಜಿ, ಬಿ.ಪಿ.ಹಂದಿಗುಂದ, ಬಿ.ಎಸ್.ಮುನ್ನೋಳಿ, ಜೆ.ಎಸ್.ಮಗದುಮ್ಮ, ಎಸ್.ಆಯ್.ಸಂಬಾಳ, ಪಿ.ಪಿ.ಖಾನಾಪೂರಿ, ಎಸ್.ಆರ್.ನಾವಲಗಿ, ಎಮ್.ಎಸ್.ಯಕ್ಸಂಬಿ, ಜಿ.ಎಸ್.ಅಂಬಲೆ, ಸಿ.ಬಿ.ಬಾಗೇವಾಡಿ, ಬಿ.ಬಿ.ರಜಪೂತ, ಎಸ್.ವಿ.ಅಥಣಿ, ಪ್ರಕಾಶ ಕುಲಕರ್ಣಿ ಸಿಬ್ಬಂದಿಗಳಾದ ಆಯ್.ಎಸ್.ತುಬಚಿ, ವಿ.ಜಿ.ಉಪ್ಪಾರ, ಗುರಲಿಂಗ ಝೊಂಡ, ಎಮ್.ಬಿ.ಮೊಕಾಶಿ, ಎ.ಎಮ್.ಕುಂಬಾರ ಇವರನ್ನು ಸತ್ಕರಿಸಲಾಯಿತು.ಹುಕ್ಕೇರಿಯ ಬನಶಂಕರಿ ಭರತನಾಟ್ಯ ನೃತ್ಯಾಲಯದ ವಿದ್ಯಾರ್ಥಿನಿಯರ ಭರತ ನಾಟ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ವೇದಿಕೆಯ ಮೇಲಿನ ಸ್ವಾಮೀಜಿಗಳು ಹಾಗೂ ಗಣ್ಯರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶರ್ಮಿಳಾ ಬಾಳಿಕಾಯಿ ಸ್ವಾಗತಿಸಿದರು. ಬಸವರಾಜ ಕುರಂದವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ನಾಯಿಕ, ಕೆ.ಕೆ.ಪಾಟೀಲ, ಬಸವರಾಜ ನಿಲವಂಗಿ ನಿರೂಪಿಸಿದರು. ಆನಂದ ಕಾಮೇರಿ ವಂದಿಸಿದರು. ಇದೇ ಸಂದಂರ್ಭದಲ್ಲಿ ಕಾರ್ಯಕ್ರಮದ ರೂವಾರಿ ಮಹಾವೀರ ನಿಲಜಗಿ ದಂಪತಿಗಳನ್ನು ಸತ್ಕರಿಸಲಾಯಿತು. ಸಿದ್ದು ಕುರಂದವಾಡೆ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರ ನೀಡಿದರು. ಸಂಜಯ ಸಂಸುದ್ದಿ ಹಾಗೂ ರಾಜಶ್ರೀ ಪಾಟೀಲ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳಿಗೆ ಮೆಲಕು ಹಾಕಿದರು. ಶ್ರೀಗಳ ಆಶೀರ್ವಚನ ಹಾಗೂ ಸ್ನೇಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಹುಕ್ಕೇರಿ ಕಾಡಸಿದ್ಧೇಶ್ವರ ಪ್ರೌಢ ಶಾಲೆಯ 1986-87 ನೇಯ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಪುನರ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ರವಿವಾರ (ದಿ.18) ದಂದು ಮಹಾವೀರ ಶಿಕ್ಷಣ ಸಂಸ್ಥೆಯ ಪ್ರಾಂಗಣದಲ್ಲಿ ಹುಕ್ಕೇರಿ ಹಿರೇಮಠದ ಶಿವಬಸವ ಸ್ವಾಮಿಗಳ ಸಾನಿಧ್ಯ ಹಾಗೂ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿಯವರ ಅಧ್ಯಕ್ಷತೆಯಲ್ಲಿ ಜರುಗಿತು.