ಅಂತರರಾಷ್ಟ್ರೀಯ

ಹೊಸ ಮಾದರಿ ಕೊರೋನ ಸೋಂಕು- ದಕ್ಷಿಣ ಆಫ್ರಿಕಾದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ

ಹೊಸ ಮಾದರಿ ಕೊರೋನ ಸೋಂಕು-  ದಕ್ಷಿಣ ಆಫ್ರಿಕಾದಲ್ಲಿ  ಕಟ್ಟುನಿಟ್ಟಿನ ನಿಯಮ ಜಾರಿ

ಪ್ರಿಟೋರಿಯಾ, ಡಿಸೆಂಬರ್ 29: ದೇಶದಲ್ಲಿ ಹೊಸ ಕರೋನಾ  ಸೋಂಕು  ಪತ್ತೆಯಾದಂತೆ,  ಜಾಡ್ಯ ಹರಡದಂತೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಹೊಸ  ಕಟ್ಟಪಾಡು  ನಿಯಮಗಳನ್ನು ಪ್ರಕಟಿಸಿದ್ದಾರೆ .

ಇದರಲ್ಲಿ ಕಟ್ಟುನಿಟ್ಟಾದ ಮುಖಗವಸು ಧರಿಸುವ , ಸಾಮಾಜಿಕ ಅಂತರ ಕಾಪಾಡುವ ಹೊಸ  ನಿಯಮಗಳು ಮತ್ತು ಕರ್ಫ್ಯೂ ವಿಸ್ತರಣೆ ಸೇರಿದೆ  ಅಧ್ಯಕ್ಷರ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಹೊರಹೊಮ್ಮಿದ ಹೊಸ ಕರೋನ ಸೋಂಕು  ಹೆಚ್ಚಿನ ವೇಗದಲ್ಲಿ ಹರಡಬಹುದು ಎನ್ನಲಾಗಿದೆ.

ಪರಿಣಾಮ  ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಕರ್ಫ್ಯೂ ವಿಸ್ತರಿಸಲು ನಿರ್ಧರಿಸಿದ್ದಾರೆ, ಮುಖವಾಡ ಧರಿಸುವುದು ಈಗ ಕಡ್ಡಾಯವಾಗಿರುತ್ತದೆ ಮತ್ತು ಉಲ್ಲಂಘಿಸುವವರು ದಂಡ ಅಥವಾ "ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಮತ್ತು ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಅಧ್ಯಕ್ಷರು  ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂತ್ಯಕ್ರಿಯೆ ಹೊರತುಪಡಿಸಿ ಸಾಮೂಹಿಕ ಕೂಟಗಳನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ 14 ದಿನಗಳವರೆಗೆ ನಿಷೇಧಿಸಲಾಗಿದೆ.  ಮಳಿಗೆಗಳಲ್ಲಿ ಈಗ ಆಲ್ಕೊಹಾಲ್ ಮಾರಾಟ ನಿಷೇಧಿಸಲಾಗಿದೆ. ಹೊಸ ನಿರ್ಬಂಧಗಳು ಹೊಸ ವರ್ಷದ ಜನವರಿ 15 ರವರೆಗೆ ಜಾರಿಯಲ್ಲಿರುತ್ತವೆ ಮತ್ತು ನಂತರ ಅವುಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. 

ಸುದ್ದಿ ಓದಿ