ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ವೇದಿಕೆ
ಮೂಡಲಗಿ 14: ಒಂದು ಕಾಳಕ್ಕೆ ದನಗ ಸಂತೆಗೆಯೊಂದಿಗೆ ಬೆಸೆದುಕೊಂಡಿದ್ದ ಮೂಡಲಗಿ ಪಟ್ಟಣ ಇಂದು ಸಹಕಾರಿ ಕ್ಷೇತ್ರದಲ್ಲಿ ಬೆಳೆವಣಿಗೆ ಹೊಂದಿ ಸಹಕಾರಿ ಪಟ್ಟಣ ಎಂಬ ಮತ್ತೊಂದು ನಾಮವನ್ನು ತನ್ನ ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿರುವ ಗಳಿಗೆಯಲ್ಲಿ ಹೊಸ ತಾಲೂಕಿನ ಕೀರಿಟ್ ದರಿಸಿ ತನ್ರನ ಮೈಯಾರ ಪ್ರದರ್ಶಿಸುತ್ತಿರುವಾಗಲೇ ಪ್ರಥಮ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಕನ್ನಡ ನುಡಿ ಹಬ್ಬಕ್ಕೆ ಪಟ್ಟಣ ಶೃಂಗಾರಗೊಂಡು ನಳನಳಿಸುತ್ತಿದೆ ಇದನ್ನು ಕಂಡು ಸಾಹಿತ್ಯಾಸಕ್ತರು ಮೈ ಮನ ಪುಳಗೊಂಡು ಸಂಭ್ರಮಿಸುತ್ತಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆ ಮಧ್ಯದಲ್ಲಿ ಮತ್ತು ಪಕ್ಕದಲ್ಲಿ ಕನ್ನಡ ಮನಸ್ಸುಗಳನ್ನು ಸಾಹಿತ್ಯಶಕ್ತರನ್ನು ಕವಿ ಸಾಹಿತಿಗಳನ್ನು ಸ್ವಾಗತಿಸಲು ಕಮಾನು, ಕಟಾಟುಗಳು , ಬ್ಯಾನರ್ಗಳು ರಾರಾಜಿಸುತ್ತಿದ್ದು ಎಲ್ಲಲ್ಲೂ ಕನ್ನಡ ಬಾವುಟ ಹಾರಾಡಾತ್ತಿವೆ.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ ವೇದಿಕೆ ನಿರ್ಮಾಣಗೊಂಡಿದ್ದು, ಕವಿ ಪಾಶ್ರ್ಚಪಂಡಿತ ಹೆಸರಿಡಲಾಗಿದೆ, ಸಭಾ ಮಂಟಪಕ್ಕೆ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ, ಒಂದನೇ ಮಹಾದ್ವಾರಕ್ಕೆ ಸಂಗೀತಗಾರ ಹೂಗಾರ ಮಲಕಪ್ಪ. ಎರಡನೇ ಮಹಾದ್ವಾರಕ್ಕೆ ಸಾಹಿತಿ ಹ.ಶಿ.ಭೈರನಟ್ಟಿ ಹಜೆಸರಿಡಲಾಗಿದೆ.
ಉತ್ಸಾಹಿ ಕಾರ್ಯಪಡೆಯನ್ನು ಹೊಂದಿರುವ ತಾಲೂಕಾಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹಗಲಿರುಳು ಶ್ರಮಿಸುತ್ತಿದ್ದು, ಬೋರಿ ಭೋಜನ ಉತ್ತರ ಕರ್ನಾಟಕ ಜನ ಭೋಜನ ಪ್ರೀಯರು ಹೀಗಾಗಿ ಉತ್ತರ ಕರ್ನಾಟಕ ವೈಶಿಷ್ಟ ಶೈಲಿಯಲ್ಲೆ ಬಾಯಿ ಚಪರಿಸುವಹಾಗೆ ಸುಮಾರು ಐದು ಸಾವಿರ ಜನಕ್ಕೆ ಊಟದ ವ್ಯವಸ್ಥೆಮಾಡಿದ್ದು, ಹೂರಣ ಹೊಳಿಗೆ ತುಪ್ಪ ಸೆಂಡಿಗೆ, ಕರಿದ ಮೆನಸಿನಕಾಯಿ, ಚಪಾತಿ, ಸಜ್ಜಿರೋಟ್ಟಿ, ಬದಣೆ ಕಾಯಿ ಪಲ್ಲೆ, ಶೇಂಗಾ ಚಟ್ನಿ, ಮಸರು, ಹೆಸರು ಕಾಳು ಪಲ್ಲೆ, ಬಿಳಿ ಅಣ್ಣ , ಕಟ್ಟಿನ ಸಾಂಬರು, ಅಂಬಲಿ, ಉಪ್ಪಿನ ಕಾಯಿ ಸೇರಿದಂತೆ ಬೋಜನ ಪ್ರೀಯರು ಬಾಯಿ ಚಪ್ಪರಿಸುವ ಹಾಗೆ ತಯಾರಿ ಮಾಡಿದ್ದಾರೆ.
ಮೇರವಣಿಗೆ: ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಪಟ್ಟಣದ ಎಲ್ಲ ರಸ್ತೆಗಳು ಅಲಂಕಾರಗೊಂಡಿದ್ದು, ಬೆಳ್ಳಿ ರಥ ಹೂ ಮಾಲೆಯಿಂದ ಶೃಂಗಾರಗೊಂಡಿದ್ದು, ಪಟ್ಟಣದ ಮಧ್ಯಭಾಗದ ಸಂಗಪ್ಪಣ್ಣಾ ವೃತ್ತದಿಂದ ಸಮ್ಮೇಳನದ ವೇದಿಕೆಯವರಿಗೆ ವಿವಿಧ ವಾಧ್ಯ ಮೇಳ, ಕಲಾ ತಂಡಗಳದೊಂದಿಗೆ ಮೇರವಣಿಗೆ ವೈಭವದಿಂದ ಜರುಗಲಿದೆ.