ಶ್ರೀಲಂಕ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ವಿರುದ್ಧ ತೀವ್ರಗೊಂಡ ಹೋರಾಟ
ಕೊಲಂಬೊ:ಮೇ 20: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಅಧ್ಯಕ್ಷ ಗೋತಬಯ್ ರಾಜಪಕ್ಸೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದ್ದಾರೆ. ಇಂಟರ್ ಯೂನಿವರ್ಸಿಟಿ ಸ್ಟೂಡೆಂಟ್ ಫೆಡರೇಶನ್ (IUSF) ವಿದ್ಯಾರ್ಥಿಗಳು ಅಧ್ಯಕ್ಷ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
“ಸುಪ್ರೀಂ ಕೋರ್ಟ್‌ನ ಆದೇಶದಂತೆ ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದರ ಹೊರತಾಗಿಯೂ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು. ಪ್ರತಿಭಟನೆಯನ್ನು ಶಾಂತಿಯಿಂದ ನಡೆಸುತ್ತಿರುವದರಿಂದ ಈ ಸ್ಥಳವನ್ನು ಪೊಲೀಸರಿಗೆ ತೊರೆಯುವಂತೆ ಹೇಳಿದೆವು. ಆದರೆ ಪೊಲೀಸರು ಒಪ್ಪದ ಕಾರಣ ವಿದ್ಯಾರ್ಥಿಗಳು ಕೊಲಂಬೊದ ಬೀದಿಗಳಲ್ಲಿ ಘೋಷಣೆಗಳನ್ನು ಬರೆಯುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದರು.
ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈಗ ವಿಶ್ವಬ್ಯಾಂಕ್ ಶ್ರೀಲಂಕಾಕ್ಕೆ 160 ಮಿಲಿಯನ್ ಡಾಲರ್ ನೀಡಿದೆ. ನೆರವಿನ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಲಂಕಾದ ಪ್ರಧಾನಿ, 160 ಮಿಲಿಯನ್ ಡಾಲರ್ ಆರ್ಥಿಕ ನೆರವು ಪಡೆದ ನಂತರವೂ ನಾವು ಇಂಧನ ಮತ್ತು ಅನಿಲವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದರು. ವಿಶ್ವಬ್ಯಾಂಕ್ ನಿಂದ ಪಡೆದ ಹಣದಲ್ಲಿ ಇಂಧನ, ಗ್ಯಾಸ್ ಖರೀದಿಸಲು ಸಾಧ್ಯವಿಲ್ಲ. ಆದಾಗ್ಯೂ, ಈ ಹಣದ ಕೆಲವು ಭಾಗವು ಇಂಧನ ಮತ್ತು ಅನಿಲವನ್ನು ಖರೀದಿಸುವ ಸಾಧ್ಯತೆಯನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತೀಯರಿಗೆ ಹೈಕಮಿಷನ್ ಮಾಹಿತಿ: ಶ್ರೀಲಂಕಾದಲ್ಲಿ ನೆಲೆಸಿರುವ ಎಲ್ಲ ಜನರನ್ನು ಭಾರತೀಯ ಹೈಕಮಿಷನ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಭಾರತ ಗುರುವಾರ ಹೇಳಿದೆ. ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಮಾಹಿತಿ ಪ್ರಕಾರ – “ಶ್ರೀಲಂಕಾದಲ್ಲಿ ವಾಸಿಸುವ ಭಾರತೀಯರು www.hcicolombo.gov.in ನಲ್ಲಿ ನೋಂದಾಯಿಸಲು ವಿನಂತಿಸಲಾಗಿದೆ. ಈ ನೋಂದಣಿಯು ದೇಶದ ಹೊರಗೆ ವಾಸಿಸುವ ನಾಗರಿಕರ ಡೇಟಾವನ್ನು ನವೀಕರಿಸುವ ಪ್ರಯತ್ನವಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.