ಖಾಸಗಿ ಹೆಲಿಕಾಪ್ಟರ್ ಗಳ ಮೇಲಿನ 25 ವರ್ಷಗಳ ನಿಷೇಧ ತೆರವುಗೊಳಿಸಿದ ಶ್ರೀಲಂಕಾ
ಕೊಲೊಂಬೋ, ಜ 17 : ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ರಾಜಧಾನಿ ಕೊಲೊಂಬೋದಿಂದ ಖಾಸಗಿ ಹೆಲಿಕಾಪ್ಟರ್ ಗಳ ಮೇಲೆ ಕಳೆದ 25 ವರ್ಷಗಳಿಂದ ವಿಧಿಸಲಾಗಿದ್ದ ನಿರ್ಬಂಧವನ್ನು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರು ತೆರವುಗೊಳಿಸಿದ್ದಾರೆ.
ಈಗ ಕೊಲೊಂಬೋದ ಗಾಲೆ ಫೇಸ್ ನ ರಕ್ಷಣಾ ಮೈದಾನದಿಂದ ಖಾಸಗಿ ಪ್ರವಾಸಿ ಹೆಲಿಕಾಪ್ಟರ್ ಗಳು ಹಾರಾಟ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಹಾರಾಟ ಪುನಾರಂಭಕ್ಕೆ ಈಗಾಗಲೇ ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.
ನಾವು ಈ ಅವಕಾಶಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದೆವು ಎಂದು ಸ್ಕೈಲಾರ್ಕ್ ಏವಿಯೇಷನ್ ಫ್ಲೈಟ್ ನ ವ್ಯವಸ್ಥಾಪಕ ಕ್ಯಾಪ್ಟನ್ ರವಿ ಧರ್ಮ ವಿಕ್ರಮ ಹೇಳಿದ್ದಾರೆ. ಇದು ಶ್ರೀಲಂಕಾ ವಿಮಾನಯಾನ ಇತಿಹಾಸದಲ್ಲಿ ಬಹುದೊಡ್ಡ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.
ಇದರಿಂದ ನಾವು ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ಜೊತೆಗೆ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಬಹುದು ಎಂದರು.
ಶ್ರೀಲಂಕಾಕ್ಕೆ ಆಗಮಿಸುವ ಹಲವು ಶ್ರೀಮಂತ ಪ್ರವಾಸಿಗರು ದ್ವೀಪದ ಪ್ರಮುಖ ಪ್ರವಾಸಿ ತಾಣಗಳಿಗೆ ಹೆಲಿಕಾಪ್ಟರ್ ಮೂಲಕ ಬಹುಬೇಗ ತಲುಪಿ, ಸುಂದರ ನೋಟಗಳಿಗೆ ಸಾಕ್ಷಿಯಾಗ ಬಯಸುತ್ತಾರೆ ಎಂದು ಧರ್ಮವಿಕ್ರಮ ಅಭಿಪ್ರಾಯಪಟ್ಟರು.
2020ರಲ್ಲಿ ಕನಿಷ್ಠ 2 ಮಿಲಿಯನ್ ಪ್ರವಾಸಿಗರನ್ನು ಹಾಗೂ 2025ರ ವೇಳೆಗೆ 10 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಶ್ರೀಲಂಕಾ ಹೊಂದಿದೆ. ಕಳೆದ ವರ್ಷ 1.9 ಮಿಲಿಯನ್ ಪ್ರವಾಸಿಗರು ಲಂಕೆಗೆ ಭೇಟಿ ನೀಡಿದ್ದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 