ಅಂತರರಾಷ್ಟ್ರೀಯ

ಸಲಹಾ ಸಮಿತಿ ನೇಮಿಸಿದ ಶ್ರೀಲಂಕಾ ಅಧ್ಯಕ್ಷ

ಸಲಹಾ ಸಮಿತಿ ನೇಮಿಸಿದ ಶ್ರೀಲಂಕಾ ಅಧ್ಯಕ್ಷ

ಕೊಲಂಬೊ: ಏಪ್ರಿಲ್ 07: ಆರ್ಥಿಕ ಮತ್ತು ಹಣಕಾಸು ತಜ್ಞರನ್ನು ಒಳಗೊಂಡ ಸಾಲ ಸುಸ್ಥಿರತೆಯ ಕುರಿತು ಸಲಹಾ ಸಮಿತಿಯನ್ನು ನೇಮಿಸಿದ್ದಾರೆ ಎಂದು ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಅಧ್ಯಕ್ಷರ ಮಾಧ್ಯಮ ವಿಭಾಗ ತಿಳಿಸಿದೆ.

ಸಲಹಾ ಸಮಿತಿಯಲ್ಲಿ ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್‌ನ ಮಾಜಿ ಗವರ್ನರ್ ಇಂದ್ರಜಿತ್ ಕುಮಾರಸ್ವಾಮಿ, ವಿಶ್ವಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಶಾಂತಾ ದೇವರಾಜನ್ ಮತ್ತು ಸಾಮರ್ಥ್ಯ ಅಭಿವೃದ್ಧಿಗಾಗಿ ಐಎಂಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಸಂಸ್ಥೆಯ ಮಾಜಿ ನಿರ್ದೇಶಕಿ ಶರ್ಮಿನಿ ಕೂರೆ ಇದ್ದಾರೆ.

ಐಎಂಎಫ್ ನೊಂದಿಗೆ ನಿಯಮಿತ ಸಂವಹನವನ್ನು ನಿರ್ವಹಿಸುವ ಕುರಿತು ಸಲಹಾ ಗುಂಪಿನ ಸದಸ್ಯರು ಈಗಾಗಲೇ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ವಿಭಾಗವು ತಿಳಿಸಿದೆ.

ಐಎಂಎಫ್ ನೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಶ್ರೀಲಂಕಾದ ಅಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸಲು ಮತ್ತು ಪ್ರಸ್ತುತ ಸಾಲದ ಬಿಕ್ಕಟ್ಟನ್ನು ನಿವಾರಿಸಲು ಮಾರ್ಗದರ್ಶನವನ್ನು ನೀಡಲು ಸಲಹಾ ಗುಂಪಿಗೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಓದಿ