ಅಂತರರಾಷ್ಟ್ರೀಯ

ಪ್ರತಿಭಟನೆ ಕುಲುಮೆಯಲ್ಲಿ ಬೇಯುತ್ತಿರೋ ಶ್ರೀಲಂಕಾದಲ್ಲಿ ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಪ್ರತಿಭಟನೆ ಕುಲುಮೆಯಲ್ಲಿ ಬೇಯುತ್ತಿರೋ ಶ್ರೀಲಂಕಾದಲ್ಲಿ ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಕೊಲಂಬೋ: ಮೇ 09: ತೀವ್ರ ಆರ್ಥಿಕ ತುರ್ತು ಪರಿಸ್ಥಿತಿ.. ಅಧ್ಯಕ್ಷರಿಂದ ತುರ್ತು ಪರಿಸ್ಥಿತಿ ಘೋಷಣೆ… ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿ.. ಪ್ರತಿಭಟನೆ ಘರ್ಷಣೆಯಲ್ಲಿ ಸಚಿವರ ಸಾವು… ಧಾನಿಯ ರಾಜೀನಾಮೆ…ಹೀಗೆ ಹಣಕಾಸಿನ ತೊಂದರೆ, ಪ್ರತಿಭಟನೆಯ ಕುಲುಮೆಯಲ್ಲಿ ಬೇಯುತ್ತಿರೋ ಶ್ರೀಲಂಕಾ ಹೊತ್ತಿ ಉರೀತಿದೆ. ಸರ್ಕಾರದ ವಿರುದ್ಧ ಸಿಡಿದೆದ್ದು ರಸ್ತೆಗಿಳಿದಿರೋ ನಾಗರಿಕರು ಶ್ರೀಲಂಕಾದ ಓರ್ವ ಸಂಸದ ಮತ್ತು ಮಾಜಿ ಸಚಿವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಮಾಜಿ ಸಚಿವ ಜಾನ್ಸನ್ ಫರ್ನಾಂಡೋ ಅವರ ಮೌಂಟ್ ಲ್ಯಾವಿನಿಯಾ ನಿವಾಸ ಮತ್ತು ಸಂಸದ ಸನತ್ ನಿಶಾಂತ ಅವರ ಮನೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ.

ಸೋಮವಾರ ಸಾವಿರಾರು ಜನ ಬೀದಿಗಿಳಿದು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿದ್ದರು. ಕೊಲಂಬೋ  ಹೊರಗೆ ನಡೆದ ಘರ್ಷಣೆಯ ಸಮಯದಲ್ಲಿ ಸಂಸದರೊಬ್ಬರು ಸೇರಿದಂತೆ ಮೂವರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

ರಾಜಧಾನಿ ಕೊಲಂಬೊದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 138 ಜನರು ಗಾಯಗೊಂಡು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

ಸುದ್ದಿ ಓದಿ