ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ಕೊಲಂಬೊ: ಜೂನ್ 27:ಶ್ರೀಲಂಕಾ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದ್ದು, ಪೆಟ್ರೋಲ್ ಬಳಕೆ ಕಡಿಮೆ ಮಾಡುವ ಸಲುವಾಗಿ ಶಾಲಾ ಕಾಲೇಜುಗಳು ಮುಚ್ಚಲು ಆದೇಶ ನೀಡಿರುವುದರ ಜೊತೆಗೆ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿದ್ದಾರೆ. ಇಂಧನಕ್ಕೆ ಸರತಿ ಸಾಲು ಶುರುವಾದ ಹಿನ್ನೆಲೆ ಶ್ರೀಲಂಕಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಸೂಚನೆ ಬರುವವರೆಗೆ ಮನೆಯಿಂದ ಕೆಲಸ ಮಾಡಲು ಸರ್ಕಾರವು ಉದ್ಯೋಗಿಗಳಿಗೆ ಹೇಳಿದೆ, ಆದರೆ ವಾಣಿಜ್ಯ ರಾಜಧಾನಿ ಕೊಲಂಬೊ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಲೆಗಳನ್ನು ಒಂದು ವಾರದವರೆಗೆ ಮುಚ್ಚಲಾಗಿದೆ.