ರಾಣೆಬೆನ್ನೂರ

ಭಾವೈಕ್ಯತೆಯ "ಕಾಕಿ ಕಾಮಣ್ಣ"ಗೆ ವಿಶೇಷ ಮೆರಗು

ಭಾವೈಕ್ಯತೆಯ "ಕಾಕಿ ಕಾಮಣ್ಣ"ಗೆ ವಿಶೇಷ ಮೆರಗು


ರಾಣೆಬೆನ್ನೂರ: 6 ಸಾಮರಸ್ಯ, ಭಾವೈಕ್ಯತೆಯ ಸಂಕೇತವಾಗಿರುವ ಹೋಳಿಯನ್ನು  ಈ ಬಾರಿ ನಗರದ ಕಾಕಿಗಲ್ಲಿಯಲ್ಲಿ ಮೂರು ದಿನಗಳ ಕಾಲ  ಬಹು ವಿಶೇಷವಾಗಿ ಜರುಗಿತಲ್ಲದೇ ಜನಾಕರ್ಷಣೆಯ ಕೇಂದ್ರವಾಗಿ ಪರಿಣಮಿಸಿತು ಎಂದು ಸಮಿತಿ ಅಧ್ಯಕ್ಷ ಶಂಕ್ರಣ್ಣ ಕಾಕಿ  ತಿಳಿಸಿದರು.  ಕಾಕಿ ಓಣಿಯಲ್ಲಿ ನಾಗರೀಕರು ಏರಿ​‍್ಡಸಿದ್ದ ಕಾಕಿ ಕಾಮಣ್ಣ ಮೂರ್ತಿಯ ಮೆರವಣಿಗೆಯು ತಮ್ಮ  ಅಧ್ಯಕ್ಷತೆಯಲ್ಲಿ   ಹಾಗೂ ರಾಮಣ್ಣ ಕಾಕಿ ನೇತೃತ್ವದಲ್ಲಿ ಬಹು ವಿಬೃಂಜಣೆಯಿಂದ  ನಡೆದು ಇತರರಿಗೂ ಮಾದರಿಯಾಗಿದ್ದು ವಿಶೇಷವಾಗಿದೆ ಎಂದರು. ಮುಂದಿನ ವರ್ಷ  ಹೋಳಿಯನ್ನು ಬಹು ವೈವಿಧ್ಯಮಯವಾಗಿ ಆಚರಿಸಲಾಗುವುದು.  ಜೊತೆಗೆ ಇನ್ನಷ್ಟು ಮೆರಗು ಮಾಡಲು ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಎಂದರು.ಈ ವರ್ಷದ ಹೋಳಿಯ ಎಲ್ಲಾ ಕಾರ್ಯಕ್ರಮಗಳಿಗೆ ಓಣಿಯ ಹಿರಿಯರು, ಯುವಕರು ಹಾಗೂ ನಗರದ ಮಹಾಜನತೆ ಆಗಮಿಸಿ  ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಕ್ಕೆ ಅವರು ಎಲ್ಲರನ್ನು ಅಭಿಂದಿಸಿದರು.ಈ ಸಂದರ್ಭದಲ್ಲಿಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಕಾರ್ಯದರ್ಶಿ ರೂಪಾ ಕಾಕಿ, ದೊಡ್ಡಹನುಮಂತಪ್ಪ ಕಾಕಿ, ಗಣೇಶ ಕಾಕಿ, ಪರಶುರಾಮ ಕಾಕಿ,ಅಮಿತ್ ಕಾಕಿ ಸೇರಿದಂತೆ ಮತ್ತಿತರರು ಇದ್ದರು 


ಸುದ್ದಿ ಓದಿ