ಜಾರಕಿಹೊಳಿ ರವರಿಗೆ ಡಿಸಿಎಂ ಹುದ್ದೆ ನೀಡಲೆಂದು ಹರಕೆ ವಿಶೇಷ ಪೂಜೆ
ಹುಕ್ಕೇರಿ 31 : ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಸ್ಥಾನ ದೊರೆಯಲಿ ಎಂದು ದೇವಿಗೆ ಹರಕೆ ಮಾಡಿಕೊಂಡ ಮಹಾಲಿಂಗ ಸಿರುಗುಪ್ಪಿ ಬಡಕುಂದ್ರಿ ಹೊಳೆಯಮ್ಮ ದೇವಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ವಿಶೇಷ ಪೂಜೆ. ರಾಜ್ಯದಲ್ಲಿ ಸಿದ್ದರಾಮಯ್ಯ ಬಿಟ್ರೇ ಅಹಿಂದ ನಾಯಕ ನಮ್ಮ ಸತೀಶ್ ಜಾರಕಿಹೊಳಿ ರವರು ಮಾಹಾಲಿಂಗ ಶಿರಗುಪ್ಪಿ ಮುಂದಾಳತ್ವದಲ್ಲಿ ವಿಶೇಷ ಪೂಜೆ ರಾಜ್ಯ ರಾಜಕಾರಣದ ಬದಲಾದ ರಾಜಕೀಯದಲ್ಲಿ ಹೊಸ ಸರ್ಕಾರ ಅವರಂಭಗೊಂಡಿದೆ.
ಅದೇ ಡಿಕೆ ಶಿವಕುಮಾರ್ ಸರ್ಕಾರ.. ಈ ಸರ್ಕಾರದಲ್ಲಿ ಯಾರಿಗೆ ಡಿಸಿಎಂ ಸ್ಥಾನ ನೀಡಬೇಕು ಅನ್ನೋದು ಹೈ ಕಮಾಂಡ್ ದೊಡ್ಡ ತಲೆ ನೋವು ಆಗಿದ್ದೆ.. ಆದ್ರೆ ಅಭಿಮಾನಿಗಳು ಮಾತ್ರ ನಮ್ಮ ನಾಯಕರಿಗೆ ಡಿಸಿಎಂ ಸ್ಥಾನ ನೀಡಬೇಕು ಅಂತ ಪಟ್ಟು ಹಿಡಿದಿದ್ದಾರೆ.. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಹುದ್ದೆ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರಿಗೆ ದೊರೆಯಲಿ ಎಂದು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ದಡದಲ್ಲಿರುವ ಹೊಳೆಮ್ಮಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹುಣ್ಣಿಮೆ ದಿನದ ಅಂಗವಾಗಿ ಯಮಕನಮರಡಿ ಕ್ಷೇತ್ರದ ಅಭಿಮಾನಿಗಳು ಹೊಳೆಮ್ಮಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸತೀಶ್ ಜಾರಕಿಹೊಳಿ ಅವರ ಭಾವಚಿತ್ರ ಹಿಡಿದು ದೇವಸ್ಥಾನದಲ್ಲಿ ವಿಶೇಷ ಆರಾಧನೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು.ಮಾಹಾನಿಂಗ ಶಿರಗುಪ್ಪಿ ಅವರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ, ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಹುದ್ದೆ ದೊರೆಯಲಿ ಎಂದು ದೇವಿಯಲ್ಲಿ ಮಾಹಾಲಿಂಗ ಶಿರಗುಪ್ಪಿ ಹರಿಕೆ ಮಾಡಿಕೊಂಡರು ರಾಜ್ಯದಲ್ಲಿ ಅಹಿಂದ ಸಮುದಾಯದ ಪ್ರಭಾವಿ ನಾಯಕರಾಗಿ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರಿಗೆ ಇನ್ನಷ್ಟು ಜವಾಬ್ದಾರಿ ಸಿಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಶ್ರೀ ದೇವಿಯ ಆಶೀರ್ವಾದದಿಂದ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಹುದ್ದೆ ದೊರೆಯಲಿ ಎಂಬುದು ನಮ್ಮ ಪ್ರಾರ್ಥನೆ."ಸಾಹುಕಾರ್ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಅಭಿಮಾನಿಗಳುಶ್ರೀ ಹೊಳೆಮ್ಮಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿರುವುದು ಗಮನ ಸೆಳೆದಿದೆ.ಈ ಸಂದರ್ಭದಲ್ಲಿ ಕ್ಷೇತ್ರ ಹೊಳೆಮ್ಮ ದೇವಿ ಪ್ರಧಾನ ಅರ್ಚಕರಾದ ಎಚ್ ಎಲ್ ಪೂಜೇರಿ.
ಕಾಂಗ್ರೆಸ್ ಯುವ ಮುಖಂಡರು ಹಾಗೂ ಮನಗುತ್ತಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಾಲಿಂಗ ಸಿರುಗುಪ್ಪಿ ಸದಾಶಿವ್ ಸಂಭಾಜಿ ದುರ್ಗಪ್ಪ ಗೋಳ ರಾಜಕೀಯ ಧುರೀಣರು ರಮೇಶ್ ಪಾಟೀಲ್ ಶಿವಣ್ಣನವರ್ ನಾಗೇಶ್ ಹತ್ತರಿಕಿ ಮಹಾದೇವ್ ಜಿಪಿ ಪಾಟೀಲ್ ವಿನಾಯಕ್ ಗಡದಿ ನಾಗೇಶ್ ಗಡದಿ ಹಾಗೂ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಗುರುಹಿರಿಯರು ಮುಖಂಡರು ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.