ಯಮಕನಮರಡಿಯಲ್ಲಿ ವಿಶೇಷ ಗ್ರಾಮಸಭೆ ಹಾಗೂ ಗಾಂಧೀಜಿ ಜಯಂತಿ ಆಚರಣೆ
ಲೋಕದರ್ಶನ ವರದಿ
ಯಮಕನಮರಡಿ, ಅ. 2: ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅ. 2ರಂದು ವಿಶೇಷ ಗ್ರಾಮಸಭೆ ಹಾಗೂ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಆಡಳಿತಾಧಿಕಾರಿ ಮಹಾದೇವ ಪಟಗುಂದಿ, ಅಭಿವೃದ್ಧಿ ಅಧಿಕಾರಿ ಎಸ್. ಕರೇನ್ನವರ,
ಕಾರ್ಯದರ್ಶಿ ಸಿ.ಕೆ. ತಳವಾರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಶ್ರೀಮತಿ ಎಂ.ಐ. ಕಣಬರ್ಗಿ, ಶಾಂತಕುಮಾರ ಮಲಾಜಿ, ವಿಶ್ವನಾಥ ಗಿರೆನ್ನವರ, ವಾಸಿಮ್ ಅಕ್ರಮ ಬಡೇಗರ್, ಇಮ್ರಾನ್ ಅರಳಿಕಟ್ಟಿ, ನಾರಾಯಣ ರಜಪೂತ, ಶ್ರೀಮತಿ ಶಶಿಕಲಾ ಮಾನಗಾಂವಿ, ಅಭಿಷೇಕ ಹುನ್ನರಗಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಜಿಪಿಎಲ್‌ಎಸ್ ಸದಸ್ಯರು ಉಪಸ್ಥಿತರಿದ್ದರು.
ವಿಶೇಷ ಗ್ರಾಮಸಭೆಯಲ್ಲಿ ಭಾರತ ಸರ್ಕಾರದ ಜಯರಾಮ ಯೋಜನೆಯಡಿ ಬರುವ ವಿವಿಧ ಯೋಜನೆಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಹೊನ್ನವರ ಎಚ್.ಎಸ್. ಅವರು ಸಭೆಗೆ ಮಾಹಿತಿ ನೀಡಿದರು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಸೌಲಭ್ಯ ದೊರಕುವಂತೆ ಕ್ರಮಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳನ್ನು ಪರೀಶೀಲಿಸಿ, ಅಗತ್ಯ ಅನುಮೋದನೆಗಳನ್ನು ನೀಡಲಾಯಿತು. ಗ್ರಾಮಸ್ಥರ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.