ಬೆಳಗಾವಿ

ಹೆಡ್ ಕಾನ್ಸ್ಟೇಬಲ್ಗಳಾಗಿ ಪದೋನ್ನತಿ: ಸವದತ್ತಿ ಪೊಲೀಸ್ ಠಾಣೆಯಲ್ಲಿ ಅಭಿನಂದನಾ ಸಮಾರಂಭ

ಹೆಡ್ ಕಾನ್ಸ್ಟೇಬಲ್ಗಳಾಗಿ ಪದೋನ್ನತಿ: ಸವದತ್ತಿ ಪೊಲೀಸ್ ಠಾಣೆಯಲ್ಲಿ ಅಭಿನಂದನಾ ಸಮಾರಂಭ


ಸವದತ್ತಿ, 02: ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಾದ ಎಂ.ಎಂ. ತಲ್ಲೂರ ಹಾಗೂ ಬಿ.ಬಿ. ತಂಗೋಜಿ ಅವರಿಗೆ ಹೆಡ್ ಕಾನ್ಸ್ಟೇಬಲ್ಗಳಾಗಿ ಪದೋನ್ನತಿ ದೊರೆತ ಹಿನ್ನೆಲೆಯಲ್ಲಿ ಹಾಗೂ ಬೇರೆಡೆಗೆ ವರ್ಗಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮದಲ್ಲಿ ಪಿಐ ಸುರೇಶ ಬೆಂಡೆಗುಂಭಳ ಅವರು ಪದೋನ್ನತಿ ಪಡೆದ ಇಬ್ಬರು ಸಿಬ್ಬಂದಿಯನ್ನು ಸನ್ಮಾನಿಸಿ, ಅವರ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಪಿಐ ಸುರೇಶ ಬೆಂಡೆಗುಂಭಳ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಪದೋನ್ನತಿ ದೊರೆಯುವುದು ಅವರ ಕರ್ತವ್ಯನಿಷ್ಠೆ ಹಾಗೂ ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ.

ಎಂ.ಎಂ. ತಲ್ಲೂರ ಹಾಗೂ ಬಿ.ಬಿ. ತಂಗೋಜಿ ಅವರು ಇದುವರೆಗೆ ಠಾಣೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಹೊಸ ಕರ್ತವ್ಯ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಇಲಾಖೆಗೆ ಉತ್ತಮ ಹೆಸರು ತರುವಂತೆ ಶುಭ ಹಾರೈಸಿದರು.  ಸರಳವಾಗಿ ನಡೆದ ಸಮಾರಂಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳು ಉಪಸ್ಥಿತರಿದ್ದು, ನೂತನ ಹೆಡ್ ಕಾನ್ಸ್ಟೇಬಲ್ಗಳಿಗೆ ಅಭಿನಂದನೆ ಸಲ್ಲಿಸಿದರು. 


ಸುದ್ದಿ ಓದಿ