ಬೆಳಗಾವಿ

ಗ್ರಾಮ ಪಂಚಾಯಿತಿಯಲ್ಲಿ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ

ಗ್ರಾಮ ಪಂಚಾಯಿತಿಯಲ್ಲಿ ಗಾಂಧೀಜಿ, ಶಾಸ್ತ್ರಿ ಜಯಂತಿ ಆಚರಣೆ

ಲೋಕದರ್ಶನ ವರದಿ  

ಯಮಕನಮರಡಿ, ಅ. 2: ಸಮೀಪದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 157ನೇ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.  

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಹೊಳೆನ್ನವರ ಹಾಗೂ ಆಡಳಿತಾಧಿಕಾರಿ, ಪಟಗುಂದಿ ಕಾರ್ಯದರ್ಶಿ ಯಾಸಿನ್ ಅರಳಿಕಟ್ಟಿ ಅವರು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರೀಫ್ ಬೇಪಾರಿ, ಸಿಬ್ಬಂದಿಗಳಾದ ಪರಶುರಾಮ ತಳವಾರ, ಕಾಡಯ್ಯ ಪೂಜೇರಿ, ವಿಜಯ ರವರೋಜಿ, ಕುಮಾರ ಕರಜಗಿ, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕಿ ನಿರ್ಮಳಾ ನೌಕೂಡಿ, ಲಕ್ಷ್ಮೀ ಛತ್ರಿ, ಸಿಬ್ಬಂದಿಗಳಾದ ಲಗಮಾ ಕಾಂಬಳೆ ಹಾಗೂ ಗಂಗಾಧರ ನಿಲಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ, ಸತ್ಯ, ಅಹಿಂಸೆ ಮತ್ತು ಕರ್ತವ್ಯನಿಷ್ಠೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಲಾಯಿತು. 


ಸುದ್ದಿ ಓದಿ