ಬೆಳಗಾವಿ

ಜಿಲ್ಲಾ ಮಟ್ಟದ ಥ್ರೋಬಾಲ್ಗೆ ಗುಳೇದಗುಡ್ಡ ಸರ್ಕಾರಿ ಶಾಲೆಯ ಬಾಲಕಿಯರು ಆಯ್ಕೆ

ಜಿಲ್ಲಾ ಮಟ್ಟದ ಥ್ರೋಬಾಲ್ಗೆ ಗುಳೇದಗುಡ್ಡ ಸರ್ಕಾರಿ ಶಾಲೆಯ ಬಾಲಕಿಯರು ಆಯ್ಕೆ


ಗುರ್ಲಾಪೂರ 02: ಪಟ್ಟಣದ ಪಿಎಂ ಶ್ರೀ ಶಾಸಕರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕಿಯರ ಥ್ರೋಬಾಲ್ ತಂಡವು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.  ಕಲ್ಲೊಳ್ಳಿ ಎಂ.ಡಿ.ಆರ್‌.ಎಸ್‌. ಶಾಲೆಯ ವಿರುದ್ಧ ನಡೆದ ಪಂದ್ಯದಲ್ಲಿ 2ಹಿ1 ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.  

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಪುರಸಭೆಯ ಮಾಜಿ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.  

ತಂಡದ ಕೋಚ್ಗಳಾದ ಶ್ರೀ ಎಲ್‌.ಆರ್‌. ಸಾಲಿಮಠ, ಶ್ರೀ ಬಿ.ವೈ. ಮೋಮಿನ್ ಹಾಗೂ ಶ್ರೀಮತಿ ಕವಿತಾ ಕಟಗಿ ಅವರು ವಿದ್ಯಾರ್ಥಿನಿಯರಿಗೆ ಶುಭಾಶಯ ಕೋರಿದರು. 


ಸುದ್ದಿ ಓದಿ