ಅಂತರರಾಷ್ಟ್ರೀಯ

ನೈಟ್ ಕರ್ಫ್ಯೂ ತೆಗೆದು ಹಾಕಿದ ದಕ್ಷಿಣ ಆಫ್ರಿಕಾ!

ನೈಟ್ ಕರ್ಫ್ಯೂ ತೆಗೆದು ಹಾಕಿದ ದಕ್ಷಿಣ ಆಫ್ರಿಕಾ!

ಜೋಹಾನ್ಸ್ ಬರ್ಗ್, ಡಿಸೆಂಬರ್ 31 :ಹೊಸ ರೂಪಾಂತರಿ ಒಮೈಕ್ರಾನ್ ಪತ್ತೆಯಾಗಿ ವಿಶ್ವವನ್ನೇ ದುಗುಡಕ್ಕೆ ತಳ್ಳಿದ್ದ ದಕ್ಷಿಣ ಆಫ್ರಿಕಾದಲ್ಲಿ ರಾತ್ರಿ ಕರ್ಫ್ಯೂ ಅನ್ನು ತೆಗೆದು ಹಾಕಲಾಗಿದೆ. ಒಮೈಕ್ರಾನ್ ರೂಪಾಂತರದಿಂದಾಗಿ ದೇಶದಲ್ಲಿ ನಾಲ್ಕನೇ ಅಲೆಯ ಉತ್ತುಂಗವು ಮುಗಿದಿದೆ ಎಂದು ಸರ್ಕಾರ ಪ್ರತಿಕ್ರಿಯ ನೀಡಿದೆ. ಸಾಂಕ್ರಾಮಿಕ ರೋಗದ ವೇಗ, ವ್ಯಾಕ್ಸಿನೇಷನ್ ಮಟ್ಟ ಮತ್ತು ಆರೋಗ್ಯ ಕ್ಷೇತ್ರದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಡಿಲಿಕೆ ಕೈಗೊಳ್ಳಲಾಗಿದೆ ಎಂದು ಸಚಿವ ಮೊಂಡಲಿ ಗುಂಗುಬೆಲೆ ಹೇಳಿದ್ದಾರೆ.

ಜನರ ಓಡಾಟದ ಮೇಲಿನ ನಿರ್ಬಂಧವನ್ನು ತೆಗೆದುಹಾಕುವುದರ ಜೊತೆಗೆ, ಸೀಮಿತ ಜನರಿಗೆ ಮಾತ್ರ ಕಾರ್ಯಕ್ರಮಗಳಿಗೆ ಪ್ರವೇಶ ಸಿಗಲಿದೆ. ಒಳಾಂಗಣ ಕಾರ್ಯಕ್ರಮಗಳಲ್ಲಿ 1000 ಜನರು ಮತ್ತು ಹೊರಾಂಗಣ ಕಾರ್ಯಕ್ರಮಗಳಲ್ಲಿ 2000 ಜನರು ಭಾಗವಹಿಸಬಹುದು ಎಂದು ಸರ್ಕಾರ ಹೇಳಿದೆ. ದಕ್ಷಿಣ ಆಫ್ರಿಕಾ ಪ್ರಸ್ತುತ ಕರೋನಾ ಎಚ್ಚರಿಕೆಯ ಸಡಿಲಿಕೆಯನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ನಾಲ್ಕನೇ ಅಲೆಯ ಉತ್ತುಂಗದ ಸ್ಥಿತಿ ತಲುಪಿದೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

ದಕ್ಷಿಣ ಆಫ್ರಿಕಾದ ಆರೋಗ್ಯ ಇಲಾಖೆಯು ಹಿಂದಿನ ವಾರಕ್ಕೆ ಹೋಲಿಸಿದರೆ ಡಿಸೆಂಬರ್ 25 ಕ್ಕೆ ಕೊನೆಗೊಂಡ ವಾರದಲ್ಲಿ ಹೊಸ ಪ್ರಕರಣಗಳಲ್ಲಿ 29.7% ಕುಸಿತ ಕಂಡಿದೆ. ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು 35 ಲಕ್ಷ ಕರೋನಾ ಪ್ರಕರಣಗಳು ಮತ್ತು 91 ಸಾವಿರ ಸಾವುಗಳು ದಾಖಲಾಗಿವೆ. ಆಫ್ರಿಕಾ ಖಂಡದಲ್ಲಿ ಕರೋನಾದಿಂದ ಹೆಚ್ಚು ಹಾನಿಗೊಳಗಾದ ದೇಶ ದಕ್ಷಿಣ ಆಫ್ರಿಕಾ ಆಗಿದೆ.

ಸುದ್ದಿ ಓದಿ