ಅಂತರರಾಷ್ಟ್ರೀಯ

ದಕ್ಷಿಣ ಆಫ್ರಿಕಾ: ಬಾರ್‌ನಲ್ಲಿ ಗುಂಡಿನ ದಾಳಿ, 14 ಮಂದಿ ಸಾವು

ದಕ್ಷಿಣ ಆಫ್ರಿಕಾ: ಬಾರ್‌ನಲ್ಲಿ ಗುಂಡಿನ ದಾಳಿ, 14 ಮಂದಿ ಸಾವು

ಜೋಹಾನ್ಸ್‌ಬರ್ಗ್: ಜುಲೈ 10 (ಯು.ಎನ್‌.ಐ./ಸ್ಪುಟ್ನಿಕ್) ದಕ್ಷಿಣ ಆಫ್ರಿಕಾದ ಸೊವೆಟೊ ನಗರದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 14 ಜನ ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಉಪನಗರ ಸೊವೆಟೊದಲ್ಲಿನ ಬಾರ್‌ನಲ್ಲಿ ಮಧ್ಯರಾತ್ರಿಯ ನಂತರ ಈ ಘಟನೆ ನಡೆದಿದೆ. ದಾಳಿಯಲ್ಲಿ 14 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 10 ಮಂದಿ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಂದು ಇಎನ್‌ಸಿಎ ಬ್ರಾಡ್‌ಕಾಸ್ಟರ್ ವರದಿ ಮಾಡಿದೆ.

ಪೊಲೀಸ್ ಕಮಿಷನರ್ ಇಲ್ಯಾಸ್ ಮಾವೆಲಾ ಅವರು ಇಎನ್‌ಸಿಎಗೆ ಮಾಹಿತಿ ನೀಡಿದ್ದು, “ಹೌದು, ಘಟನೆ ಸಂಭವಿಸಿದೆ. ಇದು ಇಂದು ಬೆಳಗಿನ ಜಾವ 12:30 ರ (ಸ್ಥಳೀಯ ಕಾಲಮಾನ) ಸುಮಾರಿಗೆ ಸಂಭವಿಸಿದೆ”. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿ ಓದಿ