ಅಂತರರಾಷ್ಟ್ರೀಯ

ದಕ್ಷಿಣ ಆಫ್ರಿಕಾ ರೂಪಾಂತರಿ; ಗಡಿಗಳನ್ನು ಮುಚ್ಚುತ್ತಿರುವ ದೇಶಗಳು ..

ದಕ್ಷಿಣ ಆಫ್ರಿಕಾ ರೂಪಾಂತರಿ;  ಗಡಿಗಳನ್ನು ಮುಚ್ಚುತ್ತಿರುವ  ದೇಶಗಳು ..

ಲಂಡನ್‌,  ನ  27: ಈ ವಾರದ ಆರಂಭದಲ್ಲಿ   ದಕ್ಷಿಣ ಆಫ್ರಿಕಾದಲ್ಲಿ   ಹೊಸ   ಕೊರೊನಾ  ರೂಪಾಂತರಿ   ಕಾಣಿಸಿಕೊಂಡಿದೆ.   ಈ   ಹೊಸ ರೂಪಾಂತರಿವನ್ನು B.1.1.529 ಎಂದು ಹೆಸರಿಸಲಾಗಿದೆ. 

ಹಿಂದಿನವುಗಳಿಗಿಂತಲೂ   ಹೆಚ್ಚು  ರೂಪಾಂತರಗೊಂಡಿರುವ    ಇದು  "  ಅತ್ಯಂತ  ಅಪಾಯಕಾರಿ " ಎಂದು ವಿಜ್ಞಾನಿಗಳು   ಎಚ್ಚರಿಸಿದ್ದಾರೆ.    ಈವರೆಗೆ  ನಾವು  ನೋಡಿದ ರೂಪಾಂತರಗಳಲ್ಲಿ ಇದು   ಅತ್ಯಂತ   ಪ್ರಮಾದಕಾರಿ  ಎಂದು   ಅವರು  ವಿಶ್ಲೇಷಿಸಿದ್ದಾರೆ.

ಇದರಿಂದಾಗಿ ಹಲವು ದೇಶಗಳು  ಮುಂಜಾಗ್ರತಾ ಕ್ರಮಗಳ ಭಾಗವಾಗಿ ತಮ್ಮ ಗಡಿಗಳನ್ನು ಮುಚ್ಚುತ್ತಿವೆ. ವಿಮಾನ  ಪ್ರಯಾಣದ ಮೇಲೆ  ನಿರ್ಬಂಧಗಳನ್ನು ವಿಧಿಸುತ್ತಿವೆ.

ದಕ್ಷಿಣ ಆಫ್ರಿಕಾ,  ಅದರ ಸುತ್ತಮುತ್ತಲಿನ   ದೇಶಗಳಿಂದ ವಿಮಾನಗಳ   ಆಗಮನ ನಿರ್ಗಮನದ ಮೇಲೆ   ಬ್ರಿಟನ್, ಸಿಂಗಾಪುರ, ಜಪಾನ್, ಇಟಲಿ, ಫ್ರಾನ್ಸ್  ಹಾಗೂ  ಮೊಜಾಂಬಿಕ್  ದೇಶಗಳು ತಾತ್ಕಾಲಿಕ ನಿಷೇಧವನ್ನು ವಿಧಿಸಿವೆ.

ಯಾವ ದೇಶಗಳಿಂದ  ವಿಮಾನ ಸಂಚಾರ ಸ್ಥಗಿತಗೊಂಡಿದೆ?ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ನಮೀಬಿಯಾ, ಜಿಂಬಾಬ್ವೆ, ಎಸ್ವತಿನಿ (ಹಿಂದೆ ಸ್ವಾಜಿಲ್ಯಾಂಡ್), ಲೆಸೊಥೊ ಜೊತೆ   ಯುರೋಪಿಯನ್ ಒಕ್ಕೂಟ  ಸಹ  ವಿಮಾನಗಳನ್ನು ರದ್ದುಗೊಳಿಸಲು ಮುಂದಾಗಿದೆ.  

ಈ ದೇಶಗಳಲ್ಲಿ 12 ಗಂಟೆಗಳಿಗಿಂತ ಹೆಚ್ಚು ಕಾಲ ಕಳೆದವರನ್ನು   ತಮ್ಮ ದೇಶ  ಪ್ರವೇಶಿಸಂತೆ  ಆದೇಶ ಹೊರಡಿಸಲು ಜೆಕ್‌  ಗಣರಾಜ್ಯ ಮುಂದಾಗಿದೆ..

ಪ್ರಸ್ತುತ  ಕೊರೊನಾದ  ನಾಲ್ಕನೇ ಅಲೆ   ಎದುರಿಸುತ್ತಿರುವ ಜರ್ಮನಿ, ಶುಕ್ರವಾರ ರಾತ್ರಿಯವರೆಗೆ ಈ ದೇಶಗಳಲ್ಲಿನ  ಜರ್ಮನಿಯರನ್ನು  ಮಾತ್ರ ಅನುಮತಿಸಲು ನಿರ್ಧರಿಸಿದೆ. ಆದರೆ,  ಅವರೆಲ್ಲರೂ 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ ಮತ್ತು ಹಾಂಗ್‌ಕಾಂಗ್‌ನ ಪ್ರಯಾಣಿಕರನ್ನು ಕೂಲಂಕುಷವಾಗಿ ತಪಾಸಣೆ ನಡೆಸುವಂತೆ  ಭಾರತ ಅಧಿಕಾರಿಗಳಿಗೆ ಆದೇಶಿಸಿದೆ.

ಸುದ್ದಿ ಓದಿ