ಸೌಂದತ್ತಿ

ದವಣದ ಹುಣ್ಣಿಮೆ: ಯಲ್ಲಮ್ಮನ ಗುಡ್ಡಕ್ಕೆ ಬಿಗಿ ಬಂದೋಬಸ್ತ್‌

ದವಣದ ಹುಣ್ಣಿಮೆ: ಯಲ್ಲಮ್ಮನ ಗುಡ್ಡಕ್ಕೆ ಬಿಗಿ ಬಂದೋಬಸ್ತ್‌

ಉಗರಗೋಳ,  25: ಸಪ್ತಗುಡ್ಡ, ಸಪ್ತಕೊಳ್ಳದ ನಡುವೆ ನೆಲೆನಿಂತ ಆದಿಶಕ್ತಿ  ರೇಣುಕಾ ಯಲ್ಲಮ್ಮನಗುಡ್ಡದಲ್ಲಿ ಏ 26ರಂದು  ಗಣೇಶ ಹಾಗೂ ಗೌರಿ ಪೂಜೆ ಹಾಗೂ ಶ್ರೀದೇವಿಗೆ ಕಂಕನ ಮಂಗಳಸೂತ್ರ ಧಾರಣೊತ್ಸವ ಕಾರ್ಯಕ್ರಮ ಜರುಗಲಿದ್ದು ಏ. 27 ರಂದು ದವಣದ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. 

ಭಕ್ತರು ಶ್ರೀ ಕ್ಷೇತ್ರದತ್ತ ಬಾರದಂತೆ ತಡೆಯಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಉಗರಗೋಳದ ರಸ್ತೆಯಿಂದ ಯಲ್ಲಮ್ಮನಗುಡ್ಡದ ಜಮದಗ್ನಿ ದೇವಾಲಯಕ್ಕೆ ಸಂಪರ್ಕಿಸುವ ಹಾಗೂ ಜೋಗಳಬಾವಿಯ ರಸ್ತೆ, ಹಾಗೂ ಸವದತ್ತಿ ನೂಲಿನ ಗಿರಣಿಯಿಂದ ಶ್ರೀ ಕ್ಷೇತ್ರ ಸಂಪರ್ಕಿಸುವ ಎಲ್ಲ ರಸ್ತೆಯನ್ನು ಈಗಾಗಲೇ ಬಂದ ಮಾಡಿ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿದ್ಲಾಗಿದೆ. 

ಕರೊನಾ ವೈರಸ್ 2 ನೇ ಅಲೆ ಭೀತಿ ಸೃಷ್ಟ್ಟಿಸಿದ ಆತಂಕದಿಂದಾಗಿ ಕಳೆದ  ಹದಿನಾಲ್ಕು ತಿಂಗಳಿಂದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಆದರೆ, ನಿತ್ಯ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳು ನಿಂತಿಲ್ಲ. ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಯಾವ ಅಡ್ಡಿಯಂತೂ ಆಗಿಲ್ಲ. 

ಕರೊನಾ ಸೋಂಕು ಹರಡುವಿಕೆ ನಿಯಂತ್ರಕ್ಕಾಗಿ ಸರ್ಕಾರ ಪ್ರಕಟಿಸಿದ್ದ ಮಾರ್ಗಸುಚಿಗಳನ್ನು ಅನುಸರಿಸಿ, ಅರ್ಚಕರ ಬಳಗವು ನಿತ್ಯ ಬೆಳಗ್ಗೆ ಮತ್ತು ಸಂಜೆ ‘ಎಲ್ಲರ ಅಮ್ಮ' ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದೆ. ಯಲ್ಲಮ್ಮ ದೇವಸ್ಥಾನಕ್ಕೆ ಕರ್ನಾಟಕಕ್ಕಿಂತಲೂ ಮಹಾರಾಷ್ಟ್ರದಿಂದ ಆಗಮಿಸುವ ಭಕ್ತರೇ ಅಧಿಕ. ಆದರೆ, ಅಲ್ಲಿ ಕರೊನಾ ನಿಯಂತ್ರಣ ಬಾರದ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೆ, ಧಾರ್ಮಿಕ ಸಂಪ್ರದಾಯವನ್ನೂ ಎಂದಿನಂತೆ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಮೊದಲಿನಂತೆ ಯಲ್ಲಮ್ಮ ದೇವಿಗೆ ವಿಶೇಷ ಪ್ರಜೆ, ಅಭಿಷೇಕ, ಅಲಂಕಾರ, ನೈವೇದ್ಯ ಮತ್ತಿತರ ಧಾರ್ಮಿಕ ಆಚರಣೆ ನಡೆಯುತ್ತಿವೆ. 

ದಿನದಿಂದ ದಿನಕ್ಕೆ ಕರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಯಲ್ಲಮ್ಮ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ.  ಕರೊನಾ ಹಾವಳಿ ತಗ್ಗಿದ ನಂತರ, ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ಕಲ್ಪಿಸಲು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಭಕ್ತರು ದವಣದ ಹುಣ್ಣಿಮೆಯನ್ನು ಶ್ರೀಕ್ಷೇತ್ರದತ್ತ ಬರದೇ ಉರುಗಳಲ್ಲಿ  ತಮ್ಮ ತಮ್ಮ ಮನೆಗಳಲ್ಲಿಯೇ ಧಾರ್ಮಿಕ ಆಚರಣೆಯನ್ನು ಕೈಗೊಳ್ಳಬೇಕು ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಮುನವಳ್ಳಿ-ಶಿಂಧೋಗಿ, ಹೂಲಿಕಟ್ಟಿ-ರಾಮದುರ್ಗ, ಹಿರೇಕುಂಬಿ-ಹಂಚಿನಾಳ, ಆಚಮಟ್ಟಿ-ಚಿಕ್ಕುಂಬಿ ಜೋಗಳಬಾವಿ ನೂಲಿನ ಗಿರಣಿ ಮತ್ತಿತರ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಭದ್ರತೆಗಾಗಿ 150 ಪೊಲೀಸರನ್ನು ನಿಯೋಜಿಸಲಾಗಿದೆ. ದವಣದ ಹುಣ್ಣಿಮೆ ಅಂಗವಾಗಿ ಭಕ್ತರು ಗುಡ್ಡಕ್ಕೆ ಬಾರದಂತೆ ಜಾಗೃತಿಯನ್ನೂ ಮೂಡಿಸಲಾಗಿದೆ. ಎಲ್ಲರೂ ಸಹಕರಿಸಬೇಕು. 


ಸುದ್ದಿ ಓದಿ